Site icon PowerTV

Busಗೆ ಕಾದು ಕಾದು ಸುಸ್ತಾಗಿ, ಎಣ್ಣೆ ಏಟಲ್ಲಿ ಈ ಭೂಪ ಮಾಡಿದ್ದೇನು ಗೊತ್ತಾ?

ಬೀದರ್ : ಬಸ್ ಗೆ ಕಾದು ಕಾದು ಸುಸ್ತಾಗಿ ಭೂಪ ಎಣ್ಣೆ ಏಟಲ್ಲಿ ಮಾಡಿದ ಯಡವಟ್ಟಿಗೆ ಕೆಎಸ್ಸಾರ್ಟಿಸಿ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಬೆಚ್ಚಿ ಬಿದ್ದಿದ್ದಾರೆ. ತಾನು ಮಾಡಿದ ಚೇಷ್ಟೆಯಿಂದ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು, ಊರಿಗೆ ಹೋಗಲು ಬಸ್ಸಿಲ್ಲ ಅಂತ ವ್ಯಕ್ತಿಯೊಬ್ಬ ಬಸ್ ಸ್ಟ್ಯಾಂಡ್ ನಲ್ಲಿ ನಿಲ್ಲಿಸಿದ್ದ ಕೆಎಸ್ಸಾರ್ಟಿಸಿ ಬಸ್ ಅನ್ನೇ ಚಲಾಯಿಸಿಕೊಂಡು ಹೋಗಿರುವ ಘಟನೆ ಬೀದರ್‌ ಜಿಲ್ಲೆಯ ಔರಾದಲ್ಲಿ ನಡೆದಿದೆ.

ಆ ಭೂಪನ ಹೆಸರು ಯಶಪ್ಪ ಸೂರ್ಯವಂಶಿ. ಈತನು ಇಟಂಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಸೋಮವಾರ ಊರಿಗೆ ಹೋಗಲು ಔರಾ ಬಸ್ ಸ್ಟ್ಯಾಂಡ್ ಗೆ ಬಂದಿದ್ದ. ಅಷ್ಟರಲ್ಲಾಗಳೇ ಫುಲ್ ಟೈಟ್ ಆಗಿದ್ದ ಭೂಪ ಈ ರೀತಿ ಮಾಡಿದ್ದಾನೆ.

ಕೆಎಸ್ಸಾರ್ಟಿಸಿ ಚಾಲಕ ಹಾಗೂ ಕಂಡಕ್ಟರ್ ಔರಾದ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದಾರೆ. ಎಂಟ್ರಿ ಮಾಡಿಕೊಂಡು ಚಹಾ ಕುಡಿದು ಬರಲು ತೆರಳಿದ್ದಾರೆ. ಈ ವೇಳೆ ಯಶಪ್ಪ ಡ್ರೈವಿಂಗ್ ಸೀಟಿನಲ್ಲಿ ಕೂತು ಬಸ್ ಸ್ಟಾರ್ಟ್ ಮಾಡಿದ್ದಾನೆ. ಎಣ್ಣೆ ಏಟಲ್ಲಿ ಈ ಭೂತ ಪ್ರಯಾಣಿಕರಿಗೆ ಶಾಕ್ ಕೊಟ್ಟಿದ್ದಾನೆ.

ಇದನ್ನೂ ಓದಿ : ಕಿಲ್ಲರ್ ಕೆಎಸ್ಸಾರ್ಟಿಸಿ : ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವು

ಕ್ರೂಸರ್ ವಾಹನಕ್ಕೆ ಡಿಕ್ಕಿ

ಬಸ್‌ ಅನ್ನು ಚಲಾಯಿಸಿ ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಬಳಿಕ ಬಸ್ ಅನ್ನು ಡಿವೈಡರ್ ಮೇಲೆ ಹತ್ತಿಸಿದ್ದಾನೆ. ಅದೃಷ್ಟವಶಾತ್ ಬಸ್‌ನಲ್ಲಿರುವ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬಸ್ ಡ್ರೈವರ್ ಮತ್ತು ಕಂಡಕ್ಟರ್ ಓಡಿ ಬಂದು ಬಸ್ ಅನ್ನು ಕಂಟ್ರೋಲ್ ಮಾಡಿದ್ದಾರೆ.

ಕೂಡಲೇ ಕೆಳಗಿಳಿದ ಯಶಪ್ಪ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಔರಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಯಶಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಬೆಳಗ್ಗೆಯಿಂದ ನಿಲ್ದಾಣದಲ್ಲಿ ಕುಳಿತರೂ ತನ್ನೂರಿಗೆ ಹೋಗಲು ಬಸ್ ಇರಲಿಲ್ಲ. ಹೀಗಾಗಿ ಬಸ್‌ ಚಲಾಯಿಸಿದ್ದಾಗಿ ಯಶಪ್ಪ ಪೊಲೀಸರಿಗೆ ತಿಳಿಸಿದ್ದಾನೆ.

Exit mobile version