Site icon PowerTV

ಇನ್ಸ್ ಪೆಕ್ಟರ್ ಸುಮಾ ಸಸ್ಪೆಂಡ್ : ಲಂಚ, ಕರ್ತವ್ಯ ಲೋಪ, ದುರ್ವತನೆ ಕಾರಣ ಒಂದಾ? ಎರಡಾ?

ಬೆಂಗಳೂರು : ಲಂಚಕ್ಕೆ ಬೇಡಿಕೆ ಮತ್ತು ಸ್ವೀಕಾರ, ಕರ್ತವ್ಯ ಲೋಪ ಹಾಗೂ ದುರ್ವತನೆ ಆರೋಪಗಳ ಮೇಲೆ ಇನ್ಸ್​ಪೆಕ್ಟರ್​​ ಸುಮಾ ಸಸ್ಪೆಂಡ್​ ಆಗಿದ್ದಾರೆ.

ಹೌದು, ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರ ಆರೋಪದಡಿಯಲ್ಲಿ ಶಿವಾಜಿನಗರ ಮಹಿಳಾ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್ ಅಮಾನತಾಗಿದ್ದಾರೆ. ಬೆಂಗಳೂರು ನಗರದ ನೂತನ ಪೊಲೀಸ್​ ಆಯುಕ್ತ ದಯಾನಂದ್​ ಅವರು ಸುಮಾ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ದುರ್ವತನೆ, ಹಿರಿಯ ಅಧಿಕಾರಿಗಳು ಹೇಳಿ ಕಳುಹಿಸಿದ ಪ್ರಕರಣದಲ್ಲಿ ಲಂಚ ಸ್ವೀಕಾರ, ಹಣ ಕೊಟ್ಟರೆ ಮಾತ್ರ ಕೆಲಸ. ಇವು ಅಮಾತನುಗೊಂಡ ಸುಮಾ ಅವರ ಮೇಲೆ ಕೇಳಿಬಂದಿರುವ ಆರೋಪಗಳು.

ಇದನ್ನೂ ಓದಿ : ಪ್ರಿಯಕರನೊಂದಿಗೆ ಗಂಡನನ್ನೇ ಕೊಲೆಗೈದು, ಅಪಘಾತವೆಂದು ಬಿಂಬಿಸಿದ ಖತರ್ನಾಕ್ ಪತ್ನಿ

ಸವಿತಾ ಜೊತೆ ಸುಮಾ ಹೆಸರು ತಳಕು

ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು ಶಿವಾಜಿನಗರ ಮಹಿಳಾ ಠಾಣೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಸಬ್​ ಇನ್ಸ್​ಪೆಕ್ಟರ್ ಸವಿತಾ 5 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲಿ ಮಹಿಳಾ ಇನ್ಸ್​ಪೆಕ್ಟರ್ ಸುಮಾ ಹೆಸರು ತಳಕು ಹಾಕಿಕೊಂಡಿತ್ತು.

ಎಚ್ಚರಿಕೆಗೂ ಬಗ್ಗದ ಇನ್ಸ್​ಪೆಕ್ಟರ್ ಸುಮಾ

ಸುಮಾ ಮೇಲೆ ಹತ್ತಾರು ಆರೋಪಗಳು ಕೇಳಿಬಂದ ಹಿನ್ನೆಲೆ ಡಿಸಿಪಿ ಭೀಮಾಶಂಕರ್ ಗುಳೇದ್ ಖಡಕ್ ಎಚ್ಚರಿಕೆ ರವಾನಿಸಿದ್ದರು. ಆದ್ರೂ, ಸುಮಾ ತನ್ನ ಹಳೆ ಚಾಳಿ ಬಿಟ್ಟಿರಲಿಲ್ಲ. ಹೀಗಾಗಿ, ಬೆಂಗಳೂರು ಪೊಲೀಸ್​ ಆಯುಕ್ತ ದಯಾನಂದ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Exit mobile version