Site icon PowerTV

ಕರ್ನಾಟಕ ವಿರುದ್ಧ ನಮೀಬಿಯಾಗೆ ಭರ್ಜರಿ ಜಯ, ಕನ್ನಡಿಗರ ಸ್ಫೋಟಕ ಶತಕ ವ್ಯರ್ಥ

ಬೆಂಗಳೂರು : ನಮೀಬಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕರ್ನಾಟಕದ ಎಲ್.ಆರ್​ ಚೇತನ್ ಹಾಗೂ ನಿಕಿನ್ ಜೋಸ್ ಸಿಡಿಲಬ್ಬರದ ಶತಕ ಹೊರತಾಗಿಯೂ ನಮೀಬಿಯಾ 5 ವಿಕೆಟ್ ಗಳ ಗೆಲವು ದಾಖಲಿಸಿತು.

ವಿಂಡ್‌ಹೋಕ್​ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ 2ನೇ ಪಂದ್ಯದಲ್ಲಿ ಟಾಸ್ ಗೆದ್ದ ನಮೀಬಿಯಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಕರ್ನಾಟಕ ನಿಗದಿತ 50 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 360 ರನ್​ ಕಲೆಹಾಕಿತು. ಆ ಮೂಲಕ ನಮೀಬಿಯಾಗೆ 361 ರನ್ ಗಳ ಬಿಗ್ ಟಾರ್ಗೆಟ್ ನೀಡಿತು.

ಬೃಹತ್ ಟಾರ್ಗೆಟ್ ಬೆನ್ನತ್ತಿದ ನಮೀಬಿಯಾಗೆ ನಾಯಕ ಗೆರ್ಹಾರ್ಡ್ ಎರಾಸ್ಮಸ್(91) ಹಾಗೂ ಮೈಕೆಲ್ ವ್ಯಾನ್ ಲಿಂಗೆನ್(104) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಸ್ಟೀಫನ್ ಬಾರ್ಡ್(57), ನಿಕೋಲಾಸ್ ಡೇವಿನ್ (70) ನೆರವಿನಿಂದ 49.5 ಓವರ್ ನಲ್ಲಿ 5 ವಿಕೆಟ್ ಗಳ ಗೆಲುವು ದಾಖಲಿಸಿತು.

ಇದನ್ನೂ ಓದಿ : ಎಲ್ಲಾ ಮಾದರಿಯ ಕ್ರಿಕೆಟ್​ಗೆ ಅಂಬಟಿ ರಾಯುಡು ವಿದಾಯ

ಚೇತನ್, ನಿಕಿನ್ ಭರ್ಜರಿ ಶತಕ

ಮೊದಲು ಬ್ಯಾಟ್ ಮಾಡಿದ ಕರ್ನಾಟಕಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಬ್ಯಾಟರ್ ರವಿಕುಮಾರ್ ಸಮರ್ಥ್​ ಕೇವಲ 5 ರನ್ ಗಳಿಸಿ ಔಟಾದರು. ಬಳಿಕ, ಜೊತೆಯಾದ ಎಲ್.ಆರ್​ ಚೇತನ್ ಹಾಗೂ ನಿಕಿನ್ ಜೋಸ್ ನಮೀಬಿಯಾ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು.

ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಚೇತನ್ ನಿಕ್ ಜೋಸ್ ಜೊತೆಗೂಡಿ ಇನಿಂಗ್ಸ್ ಕಟ್ಟಿದರು. ತಂಡ ರನ್ 100ರ ಗಡಿದಾಟದ ಬಳಿಕ ಚೇತನ್ ಹಾಗೂ ನಿಕಿನ್ ಅಬ್ಬರಿಸಿದರು. ಅರ್ಧಶತಕದ ಬಳಿಕ ಬೊಂಬಾಟ್ ಬ್ಯಾಟಿಂಗ್ ಮಾಡಿದ ಚೇತನ್ ಬೌಂಡರಿ, ಸಿಕ್ಸರ್ ಗಳ ಸುರಿಮಳೆಗೈದರು. 8 ಭರ್ಜರಿ ಸಿಕ್ಸರ್,13 ಬೌಂಡರಿಗಳೊಂದಿಗೆ ಶತಕ ಸಿಡಿಸಿದರು. ನಮೀಬಿಯಾ ಬೌಲರ್ ​ಗಳನ್ನು ಚಂಡಾಡಿದ ನಿಕಿನ್ ಜೋಸ್ 109 ಎಸೆತಗಳಲ್ಲಿ 103 ರನ್​ ಬಾರಿಸಿ ಮಿಂಚಿದರು.

Exit mobile version