Site icon PowerTV

ಬಿಸಿಲಿನಲ್ಲಿ ನಿಂತ ರೈತರಗೆ ಬಾಳೆಹಣ್ಣು ನೀಡಿ ಮಾನವೀಯತೆ ಮೆರೆದ ಪಿಎಸ್ಐ

ಹಾವೇರಿ : ಖಾಕಿಗೆ ಕರುಣೆಯಿಲ್ಲ, ಮೈ ಮೇಲೆ ಖಾಕಿ ಇದ್ದರೆ ಅಮಾನವೀಯವಾಗಿ ವರ್ತಿರುತ್ತಾರೆ ಎನ್ನುವವರಿಗೆ ಈ ಘಟನೆ ಖಾಕಿಯೊಳಗಿನ ಮಾನವೀಯತೆಯನ್ನು ಬಿಚ್ಚಿಡುತ್ತದೆ.

ಹೌದು, ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ ಬಂಕಾಪೂರದಲ್ಲಿ ನಡೆದ ಘಟನೆ ಪ್ರತ್ಯಕ್ಷ ಸಾಕ್ಷಿ. ಪಿಎಸ್ಐ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಮಳೆ ಬರುತ್ತಿದೆ. ರೈತರು ಕೃಷ್ಟಿ ಭೂಮಿ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೆ, ಬಿತ್ತನೆ ಬೀಜ ಖರೀದಿಗೆ ಮುಂದಾಗಿದ್ದಾರೆ. ಬಿಸಿಲಿನಲ್ಲಿ ನಿಂತ ರೈತರಿಗೆ ಬಾಳೆಹಣ್ಣು ನೀಡುವ ಮೂಲಕ ಪಿಎಸ್ಐ (PSI) ಮಾನವೀಯತೆ ಮೆರೆದಿದ್ದಾರೆ.

ಪರುಶುರಾಮ ಕಟ್ಟಿಮನಿ ಅವರೇ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುವ ಪಿಎಸ್ಐ. ಶಿಗ್ಗಾಂವ ತಾಲ್ಲೂಕಿನ ಬಂಕಾಪೂರದಲ್ಲಿ ಬಿತ್ತನೆ ಬೀಜಕ್ಕೆ ನಿಂತಿದ್ದ ರೈತರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪರುಶುರಾಮ ಕಟ್ಟಿಮನಿ ಅವರು ಬಿತ್ತನೆ ಬೀಜ ತರಲು ಸರತಿ ಸಾಲಿನಲ್ಲಿ ನಿಂತ ರೈತರನ್ನು ಗಮನಿಸಿದ್ದಾರೆ.

ಇದನ್ನೂ ಓದಿ : ರೈಲು ಪ್ರಯಾಣಿಕರಿಗೆ ತಿಂಡಿ, ಊಟ, ವಸತಿ ಕಲ್ಪಿಸಲಾಗಿದೆ : ತುಷಾರ್ ಗಿರಿ ನಾಥ್

ಬಾಳೆಹಣ್ಣು, ಕುಡಿಯುವ ನೀರು ವಿತರಣೆ

ಕೂಡಲೇ ರೈತರತ್ತ ಆಗಮಿಸಿದ ಅವರು ಕೆಲ ಸಮಯ ಮಾತನಾಡಿದ್ದಾರೆ. ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ಬಿತ್ತನೆ ಬೀಜ ಪಡೆಯಲು ರೈತರು ನಿಂತಿರುವ ಬಗ್ಗೆ ತಿಳಿದ ಕೂಡಲೇ ಅವರಿಗೆ ಬಾಳೆಹಣ್ಣು, ಕುಡಿಯುವ ನೀರಿ‌ನ ಬಾಟಲ್ ವಿತರಣೆ ಮಾಡಿ ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದಿದ್ದಾರೆ.

ರಾತ್ರಿ 12 ಆದ್ರೂ ಬೀಜ ತಗೊಂಡು ಹೋಗಿ

ನೀವು ಎಲ್ಲಿಂದ ಬಂದಿದ್ದೀರಿ, ಎಷ್ಟು ಗಂಟೆಯಿಂದ ಸಾಲಿನಲ್ಲಿ ನಿಂತಿದ್ದೀರಿ ಎಂದು ವಿಚಾರಿಸಿದ್ದಾರೆ. ಅಲ್ಲದೆ, ರಾತ್ರಿ 12 ಗಂಟೆಯಾದರೂ ಪರವಾಗಿಲ್ಲ ಬಿತ್ತನೆ ಬೀಜ ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಪಿಎಸ್ಐ ಪರುಶುರಾಮ ಕಟ್ಟಿಮನಿ ಹಾಗೂ ಸಿಬ್ಬಂದಿ ಕಾರ್ಯಕ್ಕೆ ರೈತರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version