Site icon PowerTV

ಜುಲೈ 1ರಿಂದ ಬಿಪಿಎಲ್, ಅಂತ್ಯೋದಯ ಫಲಾನುಭವಿಗಳಿಗೆ 10 ಕೆ.ಜಿ ಅಕ್ಕಿ : ಸಿದ್ದರಾಮಯ್ಯ

ಬೆಂಗಳೂರು : ಹಿಂದೆ ನಾವು 7 ಕೆ.ಜಿ ಕೊಡುತ್ತಿದ್ದೆವು. ಬಿಜೆಪಿಯವರು 5 ಕೆ.ಜಿ ಕೊಡುತ್ತಿದ್ದರು. ನಾವು ಜುಲೈ 1ರಿಂದ ಎಲ್ಲಾ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 10 ಕೆ.ಜಿ ಅಕ್ಕಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ನಾನು ನುಡಿದಂತೆ ನಡೆದವರು. ಇವರು 600 ಭರವಸೆಗಳನ್ನು ಕೊಟ್ಟು ಎಷ್ಟು ಭರವಸೆ ಈಡೇರಿಸಿದ್ದಾರೆ. ಪ್ರಧಾನಿ ಮೋದಿ 15 ಲಕ್ಷ ರೂ. ಕೊಡ್ತೀವಿ ಅಂದ್ರು ಕೊಟ್ರಾ? 2 ಕೋಟಿ ಉದ್ಯೋಗ ಸೃಷ್ಟಿ ಅಂದ್ರು, ಯುವಕರಿಗೆ ಉದ್ಯೋಗ ಕೊಟ್ರಾ? ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಅಂದ್ರು ಮಾಡಿದ್ರಾ? ನಾವು ಆ ರೀತಿಯಲ್ಲ. ನಾವು ಕೊಟ್ಟ ಭರವಸೆಗಳನ್ನು ಈಡೇರಿಸಲು ಬದ್ದರಾಗಿದ್ದೇವೆ ಎಂದು  ಸಿದ್ದರಾಮಯ್ಯ ಹೇಳಿದರು.

ಗ್ಯಾರಂಟಿ ನಂ.3

ಅನ್ನಭಾಗ್ಯ ಯೋಜನೆ ಜಾರಿಗೂ ಅಸ್ತು

10 ಕೆಜಿ ಅಕ್ಕಿ ನೀಡೋದಾಗಿ ಚುನಾವಣೆ ವೇಳೆ ಹೇಳಿದ್ವಿ

ಅಕ್ಕಿ ಸಂಗ್ರಹ ಇಲ್ಲದೆ ಇರೋದ್ರಿಂದ ಜುಲೈ 1ರಿಂದ ಅನ್ನಭಾಗ್ಯ ಜಾರಿ

ಎಲ್ಲಾ BPL, ಅಂತ್ಯೋದಯ ಫಲಾನುಭವಿಗಳಿಗೆ ಅನ್ನಭಾಗ್ಯ

ಗ್ಯಾರಂಟಿ ನಂ.4

ಶಕ್ತಿ ಯೋಜನೆ ಜಾರಿಗೂ ಅಸ್ತು

ಎಲ್ಲಾ ವರ್ಗದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ

ಜೂನ್​ 11ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ

ಕರ್ನಾಟಕದೊಳಗೆ ಎಲ್ಲಿ ಬೇಕಾದ್ರೂ ಸಂಚರಿಸಬಹುದು

ಮಹಿಳೆಯರ ಪ್ರಯಾಣಕ್ಕೆ ಯಾವುದೇ ನಿರ್ಬಂಧವಿಲ್ಲ

AC ಬಸ್​​ ಹೊರತುಪಡಿಸಿ ಎಲ್ಲಾ ಬಸ್​ಗಳಲ್ಲೂ ಫ್ರೀ

ರಾಜ್ಯದ ಮಹಿಳೆಯರಿಗೆ ಮಾತ್ರ ಬಸ್​ ಪ್ರಯಾಣ ಫ್ರೀ

ಜುಲೈ 1ರಿಂದ ತಲಾ 10 ಕೆಜಿ ಆಹಾರಧಾನ್ಯ ನೀಡ್ತೀವಿ

ಕೆಎಸ್ಸಾರ್ಟಿಸಿಯಲ್ಲಿ ಮಹಿಳೆಯಗೆ ಶೇ.50 ಆಸನ ಮೀಸಲು

ಬಿಎಂಟಿಸಿಯಲ್ಲಿ ಯಾವುದೇ ಮೀಸಲು ಇಲ್ಲ

ಇದನ್ನೂ ಓದಿ : 5 ಗ್ಯಾರಂಟಿ ಈ ಆರ್ಥಿಕ ವರ್ಷದಲ್ಲೇ ಜಾರಿ : ಸಿಎಂ ಸಿದ್ದರಾಮಯ್ಯ

ಗ್ಯಾರಂಟಿ ನಂ.5

ಯುವನಿಧಿ ಯೋಜನೆ ಜಾರಿಗೂ ಅಸ್ತು

2022-23ರಲ್ಲಿ ವ್ಯಾಸಂಗ ಮಾಡಿ ತೇರ್ಗಡೆ ಹೊಂದಿದವರ ಪರಿಗಣನೆ

ಎಲ್ಲಾ ಪದವೀಧರರಿಗೆ 3000 ರೂಪಾಯಿ ನೀಡ್ತೀವಿ

ರಿಜಿಸ್ಟರ್​​​ ಮಾಡಿಕೊಂಡು 2 ವರ್ಷದವರೆಗೆ ಮಾಸಿಕ 3000 ರೂ.

24 ತಿಂಗಳೊಳಗೆ ಉದ್ಯೋಗ ಪಡೆದುಕೊಂಡವರೆ ಅಂತಹ ಫಲಾನುಭವಿಗಳಿಗೆ ಸಹಾಯಧನ ಇಲ್ಲ

ವೃತ್ತಿ ಶಿಕ್ಷಣ ಪದವೀಧರರಿಗೆ(ಡಿಪ್ಲೊಮಾ)1,500 ರೂಪಾಯಿ ನೀಡ್ತೀವಿ

ಎಲ್ಲಾ ಜಾತಿ, ವರ್ಗದವರಿಗೂ ಯುವನಿಧಿ ಅನ್ವಯ

ಮಂಗಳಮುಖಿಯರಿಗೂ ಯೋಜನೆ ಅನ್ವಯಸಲಿದೆ

Exit mobile version