Site icon PowerTV

ಲವರ್​ಗೆ ಮೆಸೇಜ್ ಮಾಡಿದ ರೂಂ ಮೇಟ್​ಗೆ ಚಾಕು ಇರಿದ ಫ್ರೆಂಡ್​

ಮೈಸೂರು : ತನ್ನ ಪ್ರೇಯಸಿಗೆ ಮೆಸೇಜ್ ಮಾಡುತ್ತಿದ್ದ ರೂಂ ಮೇಟ್​ಗೆ ಚಾಕು ಇರಿದ ಘಟನೆ ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ. 

ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ನೇಹಿತ ಶ್ರೇಯಸ್ ಶಿವಕುಮಾರ್​ಗೆ ಚಾಕುವಿನಿಂದ ಇರಿದಿದ್ದು, ಗಾಯಗೊಂಡ ಶಿವಕುಮಾರ್ ನನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ರೇಯಸ್ ಎಂಬಾತ ಪ್ರಿಯಾ ಎಂಬಾಕೆಯನ್ನು ಪ್ರೀತಿಸುತ್ತಿದ್ದನು. ಮತ್ತೊಂದೆಡೆ ಶ್ರೇಯಸ್ ಹಾಗೂ ಶಿವಕುಮಾರ್ ಇಬ್ಬರು ರೂಮ್ ಮೇಟ್​ಗಳಾಗಿದ್ದರು. ಜನತಾನಗರದಲ್ಲಿ ಸ್ನೇಹಿತರು ವಾಸವಾಗಿದ್ದರು. ಶ್ರೇಯಸ್ ಪ್ರೀತಿಸುತ್ತಿದ್ದ ಯುವತಿಗೆ ಶಿವಕುಮಾರ್ ಮೆಸೇಜ್ ಮಾಡಿದ್ದನು. ಸ್ನೇಹಿತನ ಪ್ರೇಮಿ ಜೊತೆ ಸಂಪರ್ಕ ಬೆಳೆಸಿದ ಶಿವಕುಮಾರ್ ಆಕೆಯ ಜೊತೆ ಚಾಟ್ ಮಾಡುತ್ತಿದ್ದನು.

ಇದನ್ನೂ ಓದಿ : ಪ್ರಿಯಕರನೊಂದಿಗೆ ಗಂಡನನ್ನೇ ಕೊಲೆಗೈದು, ಅಪಘಾತವೆಂದು ಬಿಂಬಿಸಿದ ಖತರ್ನಾಕ್ ಪತ್ನಿ

ನಂಜನಗೂಡು ರಿಂಗ್ ರಸ್ತೆ ಬಳಿ ಗಲಾಟೆ

ಈ ವಿಚಾರ ಶ್ರೇಯಸ್​ಗೆ ಗೊತ್ತಾಗಿ ಇಬ್ಬರ ನಡುವೆ ಜಗಳ ನಡೆದಿದೆ. ನನ್ನ ಲವರ್‌ಗೆ ಮೆಸೇಜ್ ಮಾಡದಂತೆ ಶ್ರೇಯಸ್ ಎಚ್ಚರಿಕೆ ನೀಡಿದ್ದನು. ಆದರೂ, ಆಗಾಗ ಯುವತಿಗೆ ಶಿವಕುಮಾರ್ ಮೆಸೇಜ್ ಮಾಡುತ್ತಿದ್ದನು. ಈ ವಿಚಾರವಾಗಿ ನಂಜನಗೂಡು ರಿಂಗ್ ರಸ್ತೆ ಬಳಿ ಇಬ್ಬರ ನಡುವೆ ಗಲಾಟೆ ಈ ವೇಳೆ ಶಿವಕುಮಾರ್​ಗೆ ಶ್ರೇಯಸ್ ಚಾಕುವಿನಿಂದ ಇರಿದ್ದಾನೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಸವಾರ ಸಾವು

ಬೈಕ್‌ ಹಾಗೂ ಟಾಟಾ ಏಸ್ ಗೂಡ್ಸ್ ವಾಹನದ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲ್ಲೂಕಿನ ಕೆ.ಆರ್.ನಗರ ರಸ್ತೆಯ ಬಿಳಿಕೆರೆ ಬಳಿ ನಡೆದಿದೆ. ಹುಣಸೂರು ತಾಲ್ಲೂಕಿನ ಗ್ರಾಮದ ರಹಮತ್ ಮೊಹಲ್ಲಾ ನಿವಾಸಿ ಸುಹೇಬ್ (24) ಸಾವನ್ನಪ್ಪಿದ್ದು, ಹಿಂಬದಿ ಸವಾರ ಜುನೇದ್‌ಗೆ ಗಾಯವಾಗಿದೆ. ಗಾಯಾಳು ಜುನೇದ್‌‌ಗೆ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version