Site icon PowerTV

ಧೋನಿಗೆ ಮೊಣಕಾಲು ಶಸ್ತ್ರಚಿಕಿತ್ಸೆ ಯಶಸ್ವಿ, ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್

ಬೆಂಗಳೂರು : ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮೊಣಕಾಲಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಚೆನ್ನೈ ತಂಡ ಸಿಇಓ ವಿಶ್ವನಾಥನ್ ಮಾಹಿತಿ ನೀಡಿದ್ದಾರೆ.

ಎಂ.ಎಸ್ ಧೋನಿ ಅವರು ಮೊಣಕಾಲಿನ ನೋವು ಇದ್ದರೂ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ಪೂರೈಸಿದ್ದರು. ಇದೀಗ ಧೋನಿಗೆ ಯಶಸ್ವಿಯಾಗಿ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಇನ್ನೆರಡು ದಿನಗಳಲ್ಲಿ ಧೋನಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು. ಆ ಬಳಿಕ ಧೋನಿ ಸ್ವಲ್ಪ ದಿನಗಳು ವಿಶ್ರಾಂತಿ ಪಡೆಯಲಿದ್ದಾರೆ. ಮತ್ತೊಂದು ಐಪಿಎಲ್ ಟೂರ್ನಿಗೆ ಸಿದ್ದತೆ ನಡೆಸಲು ಧೋನಿಗೆ ಹೆಚ್ಚಿನ ಸಮಯ ದೊರೆಯಲಿದೆ ಎಂದು ವಿಶ್ವನಾಥನ್ ಹೇಳಿದ್ದಾರೆ.

ಇದನ್ನೂ ಓದಿ : ದಾಖಲೆಗಳ ‘ಚಾಂಪಿಯನ್ ಧೋನಿ’ : ಸಚಿನ್ ದಾಖಲೆಯೂ ಉಡೀಸ್..!

ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಪರೀಕ್ಷೆ

ಐಪಿಎಲ್ ಫೈನಲ್ ಮುಗಿದ ಬಳಿಕ (ಮೇ 31ರಂದು) ಧೋನಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆ ತೆರಳಿ ಮೊಣಕಾಲಿನ ಪರೀಕ್ಷೆ ಮಾಡಿಸಿಕೊಂಡಿದ್ದರು. ಇಂದು (ಜೂನ್ 1) ಬೆಳಗ್ಗೆ ಧೋನಿಗೆ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಡಾ.ದಿನ್ ಶಾ ಪರ್ದಿವಾಲಾ ಅವರು ಧೋನಿಯ ಮೊಣಕಾಲಿನ ಆಪರೇಷನ್ ಮಾಡಿದ್ದಾರೆ. ಇವರು ಸೆಂಟರ್ ಫಾರ್ ಸ್ಪೋರ್ಟ್ಸ್ ಮೆಡಿಸಿನ್ ಮುಖ್ಯಸ್ಥರಾಗಿದ್ದಾರೆ. ಟೀಂ ಇಂಡಿಯಾ ಬ್ಯಾಟರ್ ರಿಷಬ್ ಪಂತ್ ಅವರ ಶಸ್ತ್ರಚಿಕಿತ್ಸೆಯಲ್ಲಿ ಡಾ.ದಿನ್ ಶಾ ಪರ್ದಿವಾಲಾ ದೊಡ್ಡ ಪಾತ್ರವನ್ನು ವಹಿಸಿದ್ದರು.

Exit mobile version