Site icon PowerTV

ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಡಿ.ಕೆ ಶಿವಕುಮಾರ್

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬೆಂಗಳೂರಿನ ಸಂಜಯ್ ನಗರದ ಧವಳಗಿರಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ ಡಿ.ಕೆ ಶಿವಕುಮಾರ್ ಅವರು ಶಾಲು ಹಾಕಿ ಹೂಗುಚ್ಛ ನೀಡಿದ್ದಾರೆ. ಬಳಿಕ, ಸೌಜನ್ಯಯುತವಾಗಿ ಚರ್ಚೆ ನಡೆಸಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಆಗಮಿಸಿದ ವೇಳೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಮನೆಯಿಂದ ಹೊರಬಂದು ಸ್ವಾಗತಿಸಿದ್ದಾರೆ. ಬಳಿಕ 20 ನಿಮಿಷಗಳ ಕಾಲ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆ.

ಮೇಲ್ನೋಟಕ್ಕೆ ಇದು ಸೌಜನ್ಯದ ಭೇಟಿಯಂತೆ ಕಂಡುಬಂದರೂ ಉಭಯ ನಾಯಕರ ಭೇಟಿ ಭಾರೀ ಕುತೂಹಲ ಕೆರಳಿಸಿದೆ. ಮಾತುಕತೆ ಬಳಿಕ ಯಡಿಯೂರಪ್ಪ ಅವರು ಗೇಟ್ ಹೊರಗಡೆ ಬಂದು ಡಿಕೆಶಿಗೆ ಬೀಳ್ಕೊಟ್ಟಿದ್ದಾರೆ. ಆದರೆ, ಇಬ್ಬರು ನಾಯಕರು ಭೇಟಿ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ : CM ಆಪ್ತ ಸಲಹೆಗಾರರಾಗಿ ಸುನೀಲ್ ಕನುಗೋಲು​​​ ನೇಮಕ

ಮಾಜಿ ಮೇಯರ್‌ಗಳ ಸಭೆ

ಬೆಂಗಳೂರಿನ ಮಾಜಿ ಮೇಯರ್‌ ಸಭೆ ನಡೆಸಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರನ್ನು ಯಾವ ರೀತಿ ಅಭಿವೃದ್ಧಿ ಮಾಡಬಹುದು ಅಂತ ಸಲಹೆ ಕೇಳಿದ್ದೇನೆ. ರಿಂಗ್‌ರೋಡ್‌ಗಳಲ್ಲಿ ತ್ಯಾಜ್ಯ ರಸ್ತೆ ಬದಿ ಹಾಕುತ್ತಿದ್ದಾರೆ. ಕೆರೆಗಳಿಗೆ, ಚರಂಡಿಗಳಿಗೆ ಕಸ ಎಸೆಯುತ್ತಿದ್ದಾರೆ. ಈ ಸಂಬಂಧ ಅನೇಕ ಸಲಹೆ ಕೇಳಿದ್ದಾರೆ. ಸೋಮವಾರ ಬೆಂಗಳೂರಿನ ಎಲ್ಲಾ ಪಕ್ಷದ ಶಾಸಕರ ಸಭೆ ಕರೆಯುತ್ತಿದ್ದೇನೆ. ಸರ್ವಪಕ್ಷ ಸಭೆ ನಡೆಸ್ತೇನೆ. ಆ ಮೇಲೆ ನಮ್ಮ ಪಕ್ಷದ ಶಾಸಕರ‌ ಪ್ರತ್ಯೇಕ ಸಭೆ ಕರೆಯುತ್ತೇನೆ ಎಂದು ಹೇಳಿದ್ದಾರೆ.

ಎಲ್ಲರನ್ನು ವಿಶ್ವಾಸಕ್ಕೆ ಪಡೆಯಲು ಅದು ಆಂತರಿಕ ಸಭೆ ನಡೆಸುತ್ತೇನೆ. ಮಾಜಿ ಮೇಯರ್‌ಗಳು ನಮ್ಮ ಸರ್ಕಾರ ಬಂದಿದೆ, ಬೆಂಗಳೂರಿನ ಜನತೆಗೆ ಏನಾದ್ರೂ ಗಿಫ್ಟ್ ಕೊಡಿ ಅಂದ್ರು. ಅದಕ್ಕಾಗಿ ಮೇ 30 ರವರೆಗೆ ಇದ್ದ ತೆರಿಗೆ ವಿನಾಯ್ತಿಯನ್ನ ಜೂನ್ 30 ರವರೆಗೆ ವಿಸ್ತರಣೆ ಮಾಡಿದ್ದೇವೆ. ಜೂನ್ 30 ರವರೆಗೆ ಟ್ಯಾಕ್ಸ್ ಪೇ 5% ಡಿಸ್ಕೌಂಟ್ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ್ದಾರೆ.

Exit mobile version