Site icon PowerTV

ಜಗದೀಶ್ ಶೆಟ್ಟರ್ ನಿವಾಸಕ್ಕೆ ಡಿಸಿಎಂ ಭೇಟಿ

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್‌ (Jagadish Shettar) ಅವರಿಗೆ ಉನ್ನತ ಸ್ಥಾನಮಾನ ನೀಡುವ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಮಾತುಕತೆ ನಡೆಸಲು ಜಗದೀಶ್​ ಶೆಟ್ಟರ್​ ನಿವಾಸಕ್ಕೆ ಇಂದು  ಭೇಟಿ ನೀಡಿದ್ದಾರೆ.

ಹೌದು, ಹುಬ್ಬಳ್ಳಿಯಲ್ಲಿರುವ ಜಗದೀಶ್ ಶೆಟ್ಟರ್ ನಿವಾಸಕ್ಕೆ ಇಂದು ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ. ಅದಕ್ಕೂ ಮುನ್ನ ಬೆಳಗಾವಿಯಲ್ಲಿ(Belgavi) ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಚುನಾವಣೆಯಲ್ಲಿ ಬ್ಯುಸಿ ಇದ್ದೆ. ಪಕ್ಷಕ್ಕೆ ಶಕ್ತಿ ಕೊಟ್ಟ ಅನೇಕ ನಾಯಕರಿದ್ದಾರೆ ಭೇಟಿಯಾಗಬೇಕಿತ್ತು. ನನಗೆ ಟೈಮ್ ಸಿಕ್ಕಿರಲಿಲ್ಲ, ಸರ್ಕಾರ ರಚನೆ, ಕ್ಯಾಬಿನೆಟ್ ರಚನೆ, ಶಾಸಕಾಂಗ ಸಭೆ, ಗ್ಯಾರಂಟಿಗಳು, ಇಲಾಖಾವಾರು ಪರಿಶೀಲನೆ ಕೆಲಸ ಆಗಬೇಕಿತ್ತು. ಇದರ ಮಧ್ಯದಲ್ಲಿ ಟೈಮ್ ಮಾಡಿಕೊಂಡು ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಭೇಟಿ ಆಗಲು ಬಂದಿದ್ದೇನೆ ಎಂದರು.

 

Exit mobile version