Site icon PowerTV

Monsoon Skin Care : ಮಳೆಗಾಲದಲ್ಲಿ ಚರ್ಮದ ಆರೈಕೆಯ ಬಗ್ಗೆ ಇರಲಿ ಕಾಳಜಿ

ಬೇಸಿಗೆಕಾಲ ಕಳೆದು ಮಳೆಗಾಲ ಶುರುವಾಗುತ್ತಿದೆ.ಮಳೆಗಾಲದಲ್ಲಿ ನಮ್ಮ ಆರೋಗ್ಯದ ಜೊತೆಗೆ ಚರ್ಮದ ಆರೈಕೆಯ ಕಡೆಗೂ ಗಮನಕೊಂಡಬೇಕಾಗುತ್ತದೆ. ಮಳೆಗಾಲ ಇರುವ ಕಾರಣ ನಾವು ಸ್ವಲ್ಪ ಹೆಚ್ಚಾಗಿ ಸ್ಕೀನ್ ಕೇರ್ ಮಾಡಲೇಬೇಕಾಗುತ್ತದೆ.

ಹೌದು,ಎಲ್ಲಾ ಋತುಮಾನದಲ್ಲಿಯೂ ಚರ್ಮದ  ಹೊಳಪು ಕಾಪಾಡಿಕೊಂಡು ಆರೈಕೆ ಮಾಡುವುದು ಮುಖ್ಯವಾಗುತ್ತದೆ. ಮಳೆಗಾಲದಲ್ಲಿ ಬರುವಂತಹ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಮಾತ್ರ ನಮ್ಮನ್ನು ಕಾಡುವುದಿಲ್ಲ. ಕೆಲವು ಚರ್ಮ ಸಮಸ್ಯೆಗಳು ಸಹಾ ಹೆಚ್ಚಾಗುತ್ತದೆ. ಹಾಗಿದ್ರೆ ನಮ್ಮ ತ್ವಚೆಯ ಹಾರೈಕೆ ಹೇಗೆ ಮಾಡೋದು ಅನುವುದರ ಕುರಿತ ಟಿಪ್ಸ್ ಇಲ್ಲಿದೆ.

  1. ನಮ್ಮ ಚರ್ಮವನ್ನೂ ಕಾಪಾಡಿಕೊಳ್ಳಲು ಚರ್ಮದ ಮೇಲೆ ಏನೆಲ್ಲಾ ಲೇಪನ ಮಾಡುತ್ತೀವಿ ಅನ್ನುವುದರ ಜೊತೆಗೆ ದೇಹಕ್ಕೆ ಏನೆಲ್ಲಾ ಪೌಷ್ಠಿಕಾಂಶಗಳನ್ನು ತೆಗೆದುಕೊಳ್ಳುತ್ತೇವೆ ಎನ್ನುವುದರ ಮೇಲೂ ನಮ್ಮ ಚರ್ಮದ ಸೌದರ್ಯ ವೃದ್ಧಿ ಅವಲಂಬಿತವಾಗುತ್ತದೆ.
  2. ನೀರನ್ನ ಹೆಚ್ಚಾಗಿ ಸೇವನೆ ಮಾಡಬೇಕು. ಇದರ ಜೊತೆಗೆ ಕೆಲವೊಂದಿಷ್ಟು ಮನೆಮದ್ದನ್ನು ಮಾಡಿಕೊಳ್ಳಬೇಕು.
  3. ಒಂದು ಸ್ಪೂನ್ ಟಮೋಟೋ ಜ್ಯೋಸ್​ಗೆ​ ಜೇನುತುಪ್ಪವನ್ನು ಮಿಶ್ರಣ ಮಾಡಿ ಹುಬ್ಬು ಮತ್ತು ಕೂದಲು ತಾಕಿಸದೆ ಮುಖಕ್ಕೆ ಹಚ್ಚಿ ಒಣಗಿದ ನಂತರ ಮುಖ ತೊಳೆಯಿರಿ. ವಾರದಲ್ಲಿ  2 ಬಾರಿ ಈ ರೀತಿ ಮಾಡಿದರೆ ಸಾಕು ನಿಮ್ಮ ತ್ವಚೆಯು ಸುಂದರವಾಗಿ ಕಾಣುತ್ತದೆ.
  4. ಹಸಿ ಹಾಲಿನಲ್ಲಿ ಕಾಟನ್ ನೆನೆಸಿ ಮುಖಕ್ಕೆ ಹಚ್ಚಿ ರಾತ್ರಿಯಿಡಿ ಮುಖದ ಮೇಲೆ ಬಿಟ್ಟು ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆಯಿರಿ. ಇದು ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸಿ ,ತೇವಾಂಶದಿಂದ ಕೂಡಿರಲು ಸಹಾಯ ಮಾಡುತ್ತದೆ.
  5. ಮಳೆಯಿಂದ ಉಂಟಾಗುವ ಚರ್ಮರೋಗಗಳ ಉಪಶಮನಕ್ಕೆ ಅಲೆವೆರೊ ತುಂಬಾ ಉಪಕಾರಿ.

ಹೀಗೆ ನಾವು ನಿತ್ಯವೂ ನಮ್ಮ ಚರ್ಮದ ಆರೈಕೆ ಮಾಡಿದ್ದರೆ ನಮ್ಮ ತ್ವಚೆ ಕಾಂತಿಯನ್ನು ಹೆಚ್ಚಿಸಬಹುದು.

 

Exit mobile version