Site icon PowerTV

ಬೆಳಗಾವಿ ವಿಭಜನೆಯಾಗಲೇಬೇಕು ; ಸಚಿವ ಸತೀಶ್ ಜಾರಕಿಹೊಳಿ ಸಿಎಂಗೆ ಮನವಿ

ಬೆಳಗಾವಿ: ನಾವು ಬೆಳಗಾವಿ ವಿಭಜನೆಗೆ ಬದ್ಧರಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ (Satish Jarakiholi) ಹೇಳಿದ್ದಾರೆ.

ಹೌದು, ದೊಡ್ಡ ಜಿಲ್ಲೆಯಾಗಿರುವ ಕಾರಣ ಬೆಳಗಾವಿಯನ್ನು ನಡೆಸುವುದು ಅಷ್ಟು ಸುಲಭ ಅಲ್ಲ. ಜಿಲ್ಲೆಯನ್ನು ವಿಭಜನೆ ಮಾಡಬೇಕು.ಈಗಲೇ ನಾವು ಜಿಲ್ಲಾ ವಿಭಜನೆಯ ಬಗ್ಗೆ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಮನವಿ ಮಾಡುತ್ತೇವೆ ಎಂದರು.

ಜಿಲ್ಲೆ ವಿಭಜನೆಯಾದರೂ ಮೂರು ಜಿಲ್ಲೆ ಒಳಗೆ ಎಂಟ್ರಿ ಇದೆ. ಗೋಕಾಕ್ ಆದರೂ, ಚಿಕ್ಕೋಡಿ ಆದರೂ ಮೂರು ಜಿಲ್ಲೆಯಾದರೂ ನಂದು ಎಂಟ್ರಿ ಇದೆ. ಜಿಲ್ಲಾ ವಿಭಜನೆ ಬೇಡಲು ಎಲ್ಲರಿಗೂ ಹಕ್ಕಿದೆ ಬೇಡಲಿ ಎಂದರು. ಸಭೆಗೆ ಬಿಜೆಪಿ ಶಾಸಕರ ಗೈರು ವಿಚಾರವಾಗಿ ಮಾತನಾಡಿದ ಅವರು, ಎನಾದರೂ ಕೆಲಸ ಇದ್ದಿರಬೇಕು ಅದಕ್ಕೆ ಬಂದಿಲ್ಲ. ಅವರ ಪರವಾಗಿ ನಾನು ಚರ್ಚೆ ಮಾಡುತ್ತೇನೆ ಎಂದರು.

 

Exit mobile version