Site icon PowerTV

10 ಕೆ.ಜಿ ಅಕ್ಕಿ ಫ್ರೀ ; ಆಹಾರ ಸಚಿವ ಕೆ.ಹೆಚ್‌.ಮುನಿಯಪ್ಪ ಘೋಷಣೆ

ಬೆಂಗಳೂರು: ಅನ್ನ ಭಾಗ್ಯದ ಯೋಜನೆಯಡಿಯಲ್ಲಿ ಪಂಡಿತರ ಚೀಟಿ ಹೊಂದಿರುವ ಎಲ್ಲಾ ನಾಗರೀಕರಿಗೂ 10 ಕೆ.ಜಿ ಅಕ್ಕಿ ನೀಡುವುದಾಗಿ ಆಹಾರ ಸಚಿವ ಕೆ.ಹೆಚ್​ ಮುನಿಯಪ್ಪ ಘೋಷಣೆ ಮಾಡಿದ್ದಾರೆ. 

ಹೌದು, ಮಹಿಳೆಯರಿಗೆ ಬಸ್‌ ಆಯ್ತು..10 ಕೆಜಿ ಅಕ್ಕಿಯೂ ಫ್ರೀ ನೀಡಲು ಮುಂದಾಗಿದೆ. ಕಾಂಗ್ರೆಸ್​ ನೀಡಿದ ಎಲ್ಲಾ ಭರವಸೆಗಳನ್ನೂ ಈಡೀರಿಸಲು ಮುಂದಾಗಿದೆ.

ಆಹಾರ ಇಲಾಖೆ ಅಧಿಕಾರಿಗಳ ಜೊತೆ ಮುನಿಯಪ್ಪ ಚರ್ಚೆ ಮಾಡಿದ ಬಳಿಕ ಮಾತನಾಡಿದ ಅವರು, ಅನ್ನಭಾಗ್ಯ ಜಾರಿ ಯಾವಾಗ ಅನ್ನೋದು ನಾಳೆ ನಿರ್ಧಾರವಾಗುತ್ತೆ ಸಿಎಮ ಸಿದ್ದರಾಮಯ್ಯನ ವರ ಅನುಮೋದನೆಯ ಮೇಲೆ ಜಾರಿ ಮಾಡಲಾಗಿದೆ.

ಹಣ ಸಂಗ್ರಹ, ಅಕ್ಕಿ ಸಂಗ್ರಹ, ಅಕ್ಕಿ ಖರೀದಿ ಬಗ್ಗೆ ಚರ್ಚೆ ಮಾಡಿದ್ದೇನೆ.10 ಕೆಜಿ ಅಕ್ಕಿಗೆ 10 ಸಾವಿರ ಕೋಟಿ ಬೇಕಾಗುತ್ತದೆ. BPL ಕಾರ್ಡ್​ಗೆ ಪ್ರಸ್ತುತ 6 ಕೆ.ಜಿ ಅಕ್ಕಿ( ಕೇಂದ್ರ 5 ಕೆ.ಜಿ, ರಾಜ್ಯದ 1 ಕೆ.ಜಿ ಅಕ್ಕಿ ) ನೀಡಲಾಗುತ್ತದೆ. ಇನ್ನೂ ಅನ್ನಭಾಗ್ಯ ಯೋಜನೆಯಡಿ 26 ಲಕ್ಷ ಟನ್​ ಹೆಚ್ಚುವರಿ ಅಕ್ಕಿ ಅಗತ್ಯ.

ಕೇಂದ್ರದ ಗರೀಬ್​​ ಕಲ್ಯಾಣ್​​ ಯೋಜನೆಯಡಿ 5 ಕೆ.ಜಿ ಅಕ್ಕಿ ನೀಡಲಿದ್ದು, ಕೇಂದ್ರದ ಅಕ್ಕಿ ಜತೆ ರಾಜ್ಯ 5 ಕೆ.ಜಿ ಅಕ್ಕಿ ಸೇರಿಸಿ ವಿತರಿಸಬೇಕಾಗುತ್ತದೆ ಎಂದರು. ಉಚಿತವಾಗಿ ನೀಡಲು 2.17 ಮೆಟ್ರಿಕ್​​ ಟನ್​​ ಅಕ್ಕಿ ಖರೀದಿಸಬೇಕಿದೆ.
ರಾಜ್ಯ ಸರ್ಕಾರ ಭರಿಸಬೇಕಾದ ಹಣ -10 ಸಾವಿರ ಕೋಟಿ ರೂ ಆಗಲಿದೆ. ಇನ್ನೂ ಪ್ರತಿ ಕೆ. ಜಿ.ಗೆ 34 ರೂಪಾಯಿ ಖರ್ಚಾಗುತ್ತೆ ಎಂದು ತಿಳಿಸಿದರು.

Exit mobile version