Site icon PowerTV

ಅಂಬಿ ಬರ್ತ್​​ಡೇಗೆ ಸುಮಲತಾ ಭಾವುಕ ಪೋಸ್ಟ್​​​​

ಬೆಂಗಳೂರು: ಇಂದು ನಟ ಅಂಬರೀಷ್ ಅವರ ಜನ್ಮದಿನ. ಅಂಬಿ ಬರ್ತ್​ಡೇ ಪ್ರಯಕ್ತ ಸುಮಲತಾ ಅಂಬರೀಷ್ ಭಾವುಕವಾಗಿ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಶೇಷ ದಿನದಂದು ಕುಟುಂಬದವರು, ಸೆಲೆಬ್ರಿಟಿಗಳು, ಫ್ಯಾನ್ಸ್​ ಅಂಬಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಹೌದು, ಸೋಶಿಯಲ್ ಮೀಡಿಯಾ ಮೂಲಕ ಅಂಬರೀಷ್ ಅವರಿಗೆ ಜನ್ಮದಿನದ ಶುಭಾಶಯ ಕೋರಲಾಗುತ್ತಿದೆ. ಅಂಬಿ ಹುಟ್ಟುಹಬ್ಬದ ಪ್ರಯುಕ್ತ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಅಂಬರೀಷ್ ಸ್ಮಾರಕ ಉದ್ಘಾಟನೆ ಆಗಿರುವುದರಿಂದ ಈ ವರ್ಷ ಅವರ ಜನ್ಮದಿನ ಮತ್ತಷ್ಟು ವಿಶೇಷ ಎನಿಸಿಕೊಂಡಿದೆ.

ಸುಮಲತಾ ಅಂಬರೀಷ್ ಹಾಗೂ ಅಂಬರೀಷ್ ಪ್ರೀತಿಸಿ ಮದುವೆ ಆದವರು. ಹಲವು ವರ್ಷಗಳ ಕಾಲ ಇಬ್ಬರೂ ಹಾಯಾಗಿ ಸಂಸಾರ ನಡೆಸಿದರು. ಆದರೆ, ಅನಾರೋಗ್ಯದಿಂದ ಅಂಬರೀಷ್ ಮೃತಪಟ್ಟರು. ಅವರು ಇಲ್ಲ ಎಂಬ ನೋವು ಎಂದಿಗೂ ಮರೆಯಾಗುವಂಥದ್ದಲ್ಲ. ಆದರೆ, ಅವರು ಮಾಡಿರುವ ಪಾತ್ರ, ಹಾಕಿಕೊಟ್ಟ ಮಾರ್ಗ ಸದಾ ಜೀವಂತ ಎಂದು ಅಂಬಿಯನ್ನು ಸುಮಲತಾ ನೆನಪಿಸಿಕೊಂಡಿದ್ದಾರೆ.

Exit mobile version