Site icon PowerTV

ಅಪ್ಪು ಹಾಗೂ ಅವರ ಮಕ್ಕಳ ಹೆಸರು ಟ್ಯಾಟೂ ಹಾಕಿಸಿಕೊಂಡ ರಾಘಣ್ಣ

ಬೆಂಗಳೂರು : ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಸಹೋದರ ದಿವಂಗತ ಡಾ.ಪುನೀತ್ ರಾಜ್‌ಕುಮಾರ್ ಹಾಗೂ ಅವರ ಮಕ್ಕಳ ಹೆಸರನ್ನು ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಅಪ್ಪು ಹೆಸರಿನ ಜೊತೆಗೆ ಪುನೀತ್ ರಾಜ್ ಕುಮಾರ್ ಅವರ ಮಕ್ಕಳಾದ ಧೃತಿ ಹಾಗೂ ವಂದಿತಾ ಅವರ ಹೆಸರನ್ನು ಕೂಡ ತಮ್ಮ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಅಪ್ಪು ಜೊತೆ ಟೊಟೊ, ನುಕ್ಕಿ

ಪುನೀತ್ ಅವರನ್ನು ಎಲ್ಲರೂ ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಾರೆ. ಅಂದಹಾಗೆ, ಟೊಟೊ ಹಾಗೂ ನುಕ್ಕಿ ಎಂಬುದು ಅಪ್ಪು ಅವರ ಇಬ್ಬರು ಹೆಣ್ಣು ಮಕ್ಕಳ ನಿಕ್ ನೇಮ್. ಹೀಗಾಗಿ, ನಟ ರಾಘವೇಂದ್ರ ರಾಜ್ ಕುಮಾರ್ ಅವರು ಅಪ್ಪು ಹೆಸರಿನ ಜೊತೆ ಧೃತಿ ಹಾಗೂ ವಂದಿತಾ ಹೆಸರನ್ನೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ನಟ ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಿನಿಂದ ಅವರ ಫ್ಯಾನ್ಸ್ ಇನ್ನು ಹೊರಬಂದಿಲ್ಲ. ಇನ್ನು ಅಪ್ಪು ಕುಟುಂಬದವರಿಗೆ ಆ ನೋವು ನೂರು ಪಟ್ಟಿದೆ. ನಟ ರಾಘವೇಂದ್ರ ರಾಜ್ ಕುಮಾರ್ ಅಪ್ಪು ನೆನಪಿನಲ್ಲೇ ದಿನಕಳೆಯುತ್ತಿದ್ದಾರೆ. ಇದಕ್ಕೆ ಅಪ್ಪು ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿರುವುದೇ ಪ್ರತ್ಯಕ್ಷ ಸಾಕ್ಷಿ.

Exit mobile version