Site icon PowerTV

ನಿಮಗಿಷ್ಟದ ಫರ್ನಿಚರ್‌ ಕೊಂಡುಕೊಳ್ಳಲು ಇಂದೇ ಕೊನೆ ಅವಕಾಶ

ಬೆಂಗಳೂರು: ನಿಮಗಿಷ್ಟದ ಫರ್ನಿಚರ್‌ ಕೊಂಡುಕೊಳ್ಳಲು ಇಂದೇ ಕೊನೆ ಅವಕಾಶ. 

ಹೌದು, ಎಲ್ಲರಿಗೂ ಒಂದು ಚಂದದ ಮನೆ ಕಟ್ಟಬೇಕು. ಮನೆಯ ತುಂಬೆಲ್ಲಾ ಒಳ್ಳೊಳ್ಳೆ ಫರ್ನಿಚರ್ಸ್​ ಇರಬೇಕು. ಮನೆ ಜೊತೆಗೆ ಇಂಟೀರಿಯರ್ ಎಲ್ಲರನ್ನೂ ಅಟ್ರಾಕ್ಟ್ ಮಾಡಬೇಕು ಅಂತ ಎಲ್ಲರೂ ಆಸೆ ಪಡುತ್ತಾರೆ. ಅಂತಹವರಿಗಾಗಿ ಪವರ್‌ ಟಿವಿ ಸಹಭಾಗಿತ್ವದಲ್ಲಿ ಫರ್ನಿಚರ್ ಎಕ್ಸ್​ ಪೋ ನಡೆಯುತ್ತಿದೆ.ಫರ್ನಿಚರ್ ಪ್ರೇಮಿಗಳಿಗೆ  ಫರ್ನಿಚರ್‌ ತಗೆದುಕೊಳ್ಳಲಿ ಇದೇ ಕೊನೆ ಅವಕಾಶವಾಗಿದೆ.

ಒಂದು ಕಡೆ ಭರ್ಜರಿಯಾಗಿ ಕಾಣೋ ಸೋಫಾಗಳು. ಮತ್ತೊಂದು ಕಡೆ ಐಷಾರಾಮಿ ಪೀಠೋಪಕರಣಗಳು. ಎಲ್ಲರನ್ನೂ ಅಟ್ರ್ಯಾಕ್ಟ್‌ ಮಾಡೋ ಡೈನಿಂಗ್ ಟೇಬಲ್. ಹೀಗೆ ನೂರಾರು ಬಗೆಯ ವುಡ್ ವರ್ಕ್ ಒಂದೆಡೆಯಾದ್ರೆ. ಮತ್ತೊಂದು ಕಡೆ ಹೋಮ್ ಡೆಕೋರ್, ಕಾರ್ಪೆಟ್, ವಾಲ್ ಪೇಪರ್ ದಿನ ಬಳಕೆ ವಸ್ತುಗಳು ಮತ್ತೊಂದು ಕಡೆ.

ಇನ್ನೂ ಪವರ್  ಟಿವಿ ಪ್ರಾಯೋಜಕತ್ವದಲ್ಲಿ ಫರ್ನಿಚರ್ ಎಕ್ಸ್​ಪೋ, ಬಿಗ್ ಸಮ್ಮರ್ ಸೇಲ್‌ಗೆ ಇಂದು ಕೊನೆ ದಿನವಾಗಿದ್ದು,ಎಕ್ಸ್‌ಪೋದಲ್ಲಿ ಬಗೆ ಬಗೆಯ ಪೀಠೋಪಕರಣಗಳು ಖರೀದಿಸಲು ಇದೇ ಕೊನೆ ದಿನವಾಗಿದೆ. ಇಂದು ಗ್ರಾಹಕರು ಫರ್ನಿಚರ್​ ಎಕ್ಸ್ ಪೋಗೆ ಭೇಟಿ ನೀಡಿ ತಮಗಿಷ್ಟದ ಫರ್ನಿಚರ್​​​​ಗಳನ್ನ ಕೊಂಡುಕೊಳ್ಳಬಹುದು.

15 ಲಕ್ಷದವರೆಗಿನ ವಸ್ತುಗಳು

ಈ ಎಕ್ಸ್‌ಪೋದಲ್ಲಿ 5000 ದಿಂದ 15 ಲಕ್ಷದವರೆಗಿನ ತರಹೇವಾರಿ ವಸ್ತುಗಳು ಸಿಗುತ್ತಿದ್ದವು. ಮತ್ತೊಂದು ಸ್ಪೆಷಾಲಿಟಿ ಎಂದರೆ ಮಲೇಷಿಯಾ, ಸಿಂಗಾಪುರ, ದುಬೈ ಕಡೆಗೆ ಎಕ್ಸ್ಪೋರ್ಟ್ ಆಗುವಂತಹ ವಸ್ತುಗಳನ್ನು ಕೂಡ ಈ ಎಕ್ಸ್‌ಪೋದಲ್ಲಿ ಮಾರಾಟ ಮಾಡಲಾಗುತ್ತಿದೆ.

ಬೆಂಗಳೂರು, J.P.ನಗರದ 7ನೇ ಹಂತದಲ್ಲಿರುವ ಶುಭ್ ಕನ್ವೆನ್​ಷನ್ ಸೆಂಟರ್​ನಲ್ಲಿ ಮೇ 29ರವರೆಗೆ ಅಂದ್ರೆ 4 ದಿನಗಳ ಕಾಲ ಫರ್ನಿಚರ್ ಎಕ್ಸ್​ಪೋ ಆಯೋಜನೆ ಮಾಡಲಾಗಿತ್ತು. ನೂರಾರು ಬಗೆಯ ಹೊಚ್ಚ ಹೊಸ ಮಾದರಿಯ ಪೀಠೋಪಕರಣಗಳು ಆಕರ್ಷಕ ಬೆಲೆಗೆ ಸಿಗಲಿದೆ. ಗ್ರಾಹಕರು ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

Exit mobile version