Site icon PowerTV

ಈಗ ಫಸ್ಟ್ ನನ್ನ ಮಗನ ಮದುವೆ ಮಾಡುತ್ತೇನೆ : ಸಂಸದೆ ಸುಮಲತಾ

ಮಂಡ್ಯ : ಈಗಷ್ಟೇ ಒಂದು ಚುನಾವಣೆ ಮುಗಿದಿದೆ. ಈಗ ಫಸ್ಟ್ ನನ್ನ ಮಗನ ಮದುವೆ ಮಾಡುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಗ್ರಾಮದಲ್ಲಿ ಲೋಕಸಭಾ ಚುನಾವಣೆ,  ಅಭಿಷೇಕ್ ಅಂಬರೀಶ್ ಮದುವೆ ತಯಾರಿ ಕುರಿತು ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ.

ಮೊದಲು ನನ್ನ ಮಗನ ಮದುವೆ ಮಾಡುತ್ತೇನೆ. ಆ ಮೇಲೆ ಚುನಾವಣೆ ಬಗ್ಗೆ ಮಾತಾಡೋಣಾ. ನನಗೆ ಈಗ ತಾನೇ ಟೈಂ ಸಿಕ್ಕಿದೆ. ತಯಾರಿಯಲ್ಲಿ ನಾನು ಹೆಚ್ಚು ಭಾಗಿಯಾಗಲು ಆಗಿಲ್ಲ. ನಮ್ಮ‌ ಕುಟುಂಬ ಸದಸ್ಯರು ಎಲ್ಲಾ ಸೇರಿ‌ ತಯಾರಿ ಮಾಡ್ತಾ ಇದ್ದಾರೆ. ಅಭಿ ಮದುವೆಗೆ ಟೈಂ ಕೊಡೋಕೆ‌ ಕೆಲ ದಿನಗಳಿಂದ ಸಮಯ ಸಿಕ್ಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಅಂಬಿ ಬರ್ತ್​​ಡೇಗೆ ಸುಮಲತಾ ಭಾವುಕ ಪೋಸ್ಟ್​​​​

ಮಂಡ್ಯದಲ್ಲಿ ಬೀಗರ ಊಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮಂಡ್ಯದಲ್ಲೇ ಬೀಗರ ಊಟ ಇದೆ. ಬೀಗರ ಊಟದ ಸಿದ್ಧತೆಯೂ ನಡೆಯುತ್ತಿದೆ. ಮಂಡ್ಯದಲ್ಲಿ ಯಾವ ಜಾಗದಲ್ಲಿ ಎನ್ನುವುದೆ ಸದ್ಯದಲ್ಲೆ ಹೇಳ್ತೀನಿ ಎಂದು ಸುಮಲತಾ ತಿಳಿಸಿದ್ದಾರೆ.

ನೂತನ ಸಂಸತ್‌ ಭವನ ಉದ್ಘಾಟನೆ ವೇಳೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಸುಮಲತಾ, ಅವರು ನಮ್ಮ‌ ಹಿರಿಯರು. ಅವರ ಮೇಲೆ ತುಂಬಾ ಅಭಿಮಾನವಿದೆ. ಅಭಿಮಾನವನ್ನು ಯಾವತ್ತೂ ಇಲ್ಲ ಎನ್ನಲ್ಲ. ಅವರ ಮೇಲೆ ಒಂದು‌ ಸ್ಥಾನಮಾನ ಗೌರವಿದೆ. ಅವರನ್ನು ಮಾತಾಡಿಸಿ‌ದ್ದು ಖುಷಿ ಆಯ್ತು. ಅವರು ಸಹ ತುಂಬಾ ಅಭಿಮಾನದಿಂದ ಮಾತಾಡಿಸಿದ್ರು. ಮದುವೆ ಆಹ್ವಾನ ನೀಡಿದ್ದೇನೆ. ಎಲ್ಲರಿಗೂ ಮದುವೆಗೆ ಆಹ್ವಾನ ನೀಡಿದ್ದೇವೆ. ಎಲ್ಲಾ ಪಕ್ಷಗಳ ನಾಯಕರಿಗೂ ಆಹ್ವಾನ ನೀಡಿದ್ದೇವೆ ಎಂದು ಹೇಳಿದ್ದಾರೆ.

Exit mobile version