Site icon PowerTV

ಕಾಂಗ್ರೆಸ್​ ಗ್ಯಾರಂಟಿಗಳು ವಿಳಂಬವಾಗುವುದಿಲ್ಲ ತಾಳ್ಮೆ ಇರಲಿ ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಎಲ್ಲಾ ಗ್ಯಾರಂಟಿಗಳನ್ನು ನಾವು ಶೀಘ್ರದಲ್ಲಿ ಜಾರಿಗೆ ತರುತ್ತೇವೆ. ಪ್ರತಿ ಪಕ್ಷ‘ದವರು ತುಸು ತಾಳ್ಮೆಯಿಂದ ಇರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀಹೆಬ್ಬಾಳಕರ್ ಹೇಳಿದ್ದಾರೆ.

ಹೌದು, ಮಾಧ್ಯಮ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವು ಚುನಾವಣೆಯ ಹಂತದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೀವೆ ಸ್ವಲ್ಲ ತುಸು ಸಮಯದವರೆಗೂ ತಾಳ್ಮೆಯಿಂದ ಕಾಯಬೇಕು ಆದರೆ,  ನಾವು ಬಹಳ ದಿನ ನಾವು ಜನರನ್ನೂ ಕಾಯುಸುವುದಿಲ್ಲ. ಎಂದು ಹೇಳಿದ್ದಾರೆ.

ಇನ್ನೂ ಬಿಜೆಪಿಯವರು ಪ್ರತಿಯೊಬ್ಬರ ಖಾತೆಗೆ 15 ಸಾವಿರ ರೂ ಆಗುತ್ತೇನೆ ಆಂತಾ ಹೇಳಿದ್ರು ಆದರೆ ಅದು 14 ವರ್ಷ ಕಳೆದಿದೆ. ಅದರೆ ಅವ್ರು ನಂಬಿಸಿ ಕೈ ಬಿಟ್ಟಿದ್ದಾರೆ, ಆದರೆ ನಾವು ಹಾಗಲ್ಲ. ನಾವು ವಾಗ್ದಾನ ಮಾಡಿದ ಹಾಗೆ  ಜಾರಿ ಮಾಡುತ್ತೇವೆ ವಿಳಂಬ ಮಾಡುವುದಿಲ್ಲ. ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿದ್ದಕ್ಕೆ ಖುಷಿ ‌ಇದೆ ಎಂದು ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು.

 

Exit mobile version