Site icon PowerTV

ಮೈಸೂರಿನಲ್ಲಿ ಭೀಕರ ಅಪಘಾತ, 10 ಮಂದಿ ದುರ್ಮರಣ

ಮೈಸೂರು : ರಾಜ್ಯದಲ್ಲಿ ಇಂದು ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ.

ಮೈಸೂರಿನ ತಿ.ನರಸೀಪುರ ತಾಲೂಕಿನ ಕೊಳ್ಳೇಗಾಲ ಮುಖ್ಯರಸ್ತೆ ಕುರುಬೂರು ಬಳಿ ಇರುವ ಪಿಂಜಾರ ಪೋಲೊ ಕ್ರಾಸ್ ಬಳಿ ಖಾಸಗಿ ಬಸ್ ಹಾಗೂ ಇನ್ನೋವಾ ಕಾರಿನ ನಡುವೆ ದಾರುಣ ಘಟನೆ ನಡೆದಿದೆ.

ಕಾರಿನಲ್ಲಿ ಸಿಲುಕಿರುವವರನ್ನು ಸ್ಥಳಿಯರು ರಕ್ಷಿಸಿದ್ದು, ಮಗು ಸೇರಿ ಹಲವರನ್ನು ಟಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಜಖಂ ಆಗಿದೆ. ಇನೋವಾ ಕಾರಿನಲ್ಲಿದ್ದವರು ಮೂಲತಃ ಬಳ್ಳಾರಿಯವರಾಗಿದ್ದು ಪ್ರವಾಸಕ್ಕೆಂದು ಬಂದಿದ್ದರು. ಬಿಳಿಗಿರಿರಂಗನ ಬೆಟ್ಟ ಪ್ರವಾಸ ಮುಗಿಸಿ ವಾಪಸ್ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ಟಿ.ನರಸೀಪುರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಾರ್ ನಲ್ಲಿದ್ದವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

3 ಮಕ್ಕಳು ಸೇರಿ 10 ಮಂದಿ ಸಾವು

ಅಪಘಾತದಲ್ಲಿ ಮೂವರು ಮಕ್ಕಳು ಸೇರಿ 10 ಮಂದಿ ಸಾವನ್ನಪ್ಪಿದ್ದಾರೆ. ಪವನ್ (8), ಶ್ರಾವ್ಯ (5), ಕಾರ್ತಿಕ್(8),  ಗಾಯತ್ರಿ (28), ಮಂಜುನಾಥ್ (35), ಪೂರ್ಣಿಮಾ (30), ಕೋಟ್ಯರೇಶ್ (45), ದುಜಾತಾ (40), ಸಂದೀಪ್ (23) ಮೃತರು ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಕಾರು ಅಪಘಾತ : ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 2 ಲಕ್ಷ ಪರಿಹಾರ

ಪಿಡ್ಸ್ ಬಂದು ಬೈಕ್ ಸವಾರ ಸಾವು

ಬೈಕ್ ನಲ್ಲಿ ಚಲಿಸುತ್ತಿರುವಾಗಲೇ ಪಿಡ್ಸ್ ಬಂದು ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್-ಅತ್ತಿಬೆಲೆ ಮುಖ್ಯರಸ್ತೆಯ ದಿನ್ನೂರು ಕ್ರಾಸ್ ಬಳಿ ನಡೆದಿದೆ. ಗುಮ್ಮಳಾಪುರ ಗ್ರಾಮದ ನಿವಾಸಿ ಶ್ರೀನಿವಾಸಯ್ಯ(68) ಮೃತ ದುರ್ದೈವಿ.

ಮೃತ ವ್ಯಕ್ತಿ ಅತ್ತಿಬೆಲೆಗೆ ಹೋಗಿ ಗುಮ್ಮಳಾಪುರದ ಕಡೆಗೆ ವಾಪಸ್ಸಾಗುವಾಗ ಪಿಡ್ಸ್ ಬಂದು ಬೈಕ್ ನಿಂದ ಬಿದ್ದಿದ್ದಾರೆ‌. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಕೂಡಲೇ ರಕ್ಷಣೆಗೆ ಆಗಮಿಸಿದರು. ಆದರೆ, ಅಷ್ಟರ ವೇಳೆಗೆ ಬೈಕ್ ಸವಾರನ ಪ್ರಾಣ ಪಕ್ಷಿಹಾರಿಹೋಗಿದೆ. ಆನೇಕಲ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version