Site icon PowerTV

ಬ್ರಿಟಿಷರ ಸಂಸತ್ ನಲ್ಲಿ ವಿಪಕ್ಷ ನಾಯಕರು ಎಂಜಾಯ್ ಮಾಡ್ತಿದ್ರು : ಶೋಭಾ ಕರಂದ್ಲಾಜೆ ವ್ಯಂಗ್ಯ

ಬೆಂಗಳೂರು : ವಿರೋಧ ಪಕ್ಷಗಳು ಆಡಳಿತ ಪಕ್ಷವನ್ನು ಸದಾ ವಿರೋಧ ಮಾಡೋಕೆ ಇರೋದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಪಕ್ಷ ನಾಯಕರಿಗೆ ಟಕ್ಕರ್ ಕೊಟ್ಟಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಸಂಸತ್ ಭವನ ಉದ್ಘಾಟನೆಯಾಗಿದೆ. ಬ್ರಿಟಿಷ್‌ರ ಸಂಸತ್​​​ನಲ್ಲಿ ವಿಪಕ್ಷ ನಾಯಕರು ಎಂಜಾಯ್ ಮಾಡ್ತಿದ್ರು. ನಮ್ಮ ಸಂಸತ್ ಬಗ್ಗೆ ಅವರಿಗೆ ಖುಷಿ ಇಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

ಪರಕೀಯರ ಮನಸ್ಥಿತಿಯಿಂದ ನಾವು ಹೊರ ಬರಬೇಕಿದೆ. ಪ್ರಧಾನಿ ಕೇವಲ ಒಂದು ಪಕ್ಷದ ಪ್ರಧಾನಿ ಅಲ್ಲ, ಇಡೀ ದೇಶದ ಪ್ರಧಾನಿ. ವಿದೇಶಕ್ಕೆ ಹೋದಾಗ ಇಡೀ ದೇಶವನ್ನು ಪ್ರತಿನಿಧಿಸುತ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಇದನ್ನೂ ಓದಿ : ನೂತನ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ

ಇನ್ನು ದೇವೇಗೌಡರು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ದೇವೇಗೌಡರ ದೊಡ್ಡತನ, ಅನುಭವಿ ರಾಜಕಾರಣಿ. ಹಲವು ವಿಚಾರಧಾರೆಗಳನ್ನು ತಿಳಿದಿರುವವರು. ಅವರು ಭಾಗಿಯಾಗಿರೋದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಶೃಂಗೇರಿ ಮಠದ ಪುರೋಹಿತರು ಭಾಗಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಂಸತ್ ಶಂಕು ಸ್ಥಾಪನೆ ಮತ್ತು ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು. ಶೃಂಗೇರಿ ಮಠದ ಪುರೋಹಿತರು ಭಾಗಿಯಾಗಿರೋದು ತುಂಬಾ ಖುಷಿಯಾಗಿದೆ. ವಿಶೇಷವಾಗಿ ನನ್ನ ಕ್ಷೇತ್ರ, ನನ್ನ ಮತದಾರರು ಅನ್ನೊದು ಮತ್ತಷ್ಟು ಖುಷಿಯ ವಿಚಾರವಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Exit mobile version