Site icon PowerTV

ಮಗು ಹುಟ್ಟಿ 15 ದಿನ ಆಗಿದೆ.. ಬಟ್ಟೆ ಹೊಲಿಸೋಕೆ ಅಳತೆ ಕೊಡಬೇಕು : ಡಿ.ಕೆ ಶಿವಕುಮಾರ್ ಟಾಂಗ್

ಬೆಂಗಳೂರು : ಮಗು ಹುಟ್ಟಿ ಇನ್ನೂ 15 ದಿನ ಆಗಿದೆ. ಬಟ್ಟೆ ಹೊಲಿಸಬೇಕು, ಅಳತೆ ಕೊಡಬೇಕು ಎಂದು ಹೇಳುವ ಮೂಲಕ ವಿಪಕ್ಷ ನಾಯಕರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಟಕ್ಕರ್ ಕೊಟ್ಟಿದ್ದಾರೆ.

ಐದು ಉಚಿತ ಗ್ಯಾರಂಟಿ ಜಾರಿ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿರುವ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ.

ಜೂನ್ 1ರಂದು ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ. 5 ಉಚಿತ ಗ್ಯಾರಂಟಿಗಳ ಜಾರಿ ಬಗ್ಗೆ ಗೈಡ್‌ಲೈನ್ಸ್‌ ಬರಲಿದೆ. ಪ್ರತಿಭಟನೆ ಮಾಡೋರಿಗೆ ಬೇಡ ಅನ್ನಲ್ಲ, ಮಾಡಲಿ ಬಿಡಿ ಎಂದು ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿ ಸರ್ಕಾರ 15 ಲಕ್ಷ ರೂ. ಖಾತೆಗೆ ಹಾಕುತ್ತೇವೆ ಅಂದ್ರಲ್ಲಾ? ಹಾಕಿದ್ರಾ? ಒಂದು ಲಕ್ಷ ರೂ. ಸಾಲ ಮನ್ನಾ ಮಾಡ್ತೀವಿ ಅಂದ್ರು, ಏನಾಯ್ತು? ಫಸ್ಟ್ ಬಿಜೆಪಿಯವರು ನೀಡಿದ್ದ ಭರವಸೆಗಳ ಬಗ್ಗೆ ಮಾತನಾಡಲಿ. ಆಮೇಲೆ ನಮ್ಮ ಭರವಸೆ ಬಗ್ಗೆ ನೋಡೋಣ ಎಂದು ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ : ಕನಿಷ್ಠ 20 ಸ್ಥಾನ ಗೆದ್ದು ವರಿಷ್ಠರಿಗೆ ಗಿಫ್ಟ್ ನೀಡಬೇಕು : ಸಚಿವರಿಗೆ ಟಾಸ್ಕ್ ಕೊಟ್ಟ ಸಿದ್ದರಾಮಯ್ಯ

ನಾವು ಪಕ್ಷ ಬಿಟ್ಟು ಹೋಗಿದ್ರೆ ಏನೋನೋ ಆಗ್ತಿದ್ವಿ

ಇನ್ನೂ ಸಚಿವ ರಾಮಲಿಂಗಾ ರೆಡ್ಡಿ ಖಾತೆ ಹಂಚಿಕೆ ಕುರಿತು ಮಾತನಾಡಿದ ಡಿಕೆಶಿ, ಸಮ್ಮಿಶ್ರ ಸರ್ಕಾರದಲ್ಲಿ ರಾಮಲಿಂಗಾ ರೆಡ್ಡಿ ಹಾಗೂ ನನಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ನಾವೆಲ್ಲಾ ಪಕ್ಷ ಬಿಟ್ಟು ಹೋಗಿದ್ದರೆ ಏನೋನೋ ಆಗ್ತಿದ್ವಿ. ಕೆಲವೊಮ್ಮೆ ಪಕ್ಷದ ತೀರ್ಮಾನಕ್ಕೆ ನಾವು ಬದ್ದರಾಗಿರಬೇಕಾಗುತ್ತೆ ಎಂದು ಹೇಳಿದ್ದಾರೆ.

ರಾಮಲಿಂಗಾ ರೆಡ್ಡಿ ಸತತ 8 ಬಾರಿ ಶಾಸಕರಾಗಿದ್ದಾರೆ. ಪಕ್ಷದ ತೀರ್ಮಾನಕ್ಕೆ ಅವರು ಬದ್ದರಾಗಿದ್ದಾರೆ. ಹೀಗಾಗಿ, ಖಾತೆಗಳ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಬಹಳಷ್ಟು ಬಾರಿ ನೋವು ತಿಂದಿದ್ದೇವೆ. ಪಕ್ಷವನ್ನೂ ಕಟ್ಟಿದ್ದೇವೆ. ಮನುಷ್ಯ ಅಂದ ಮೇಲೆ ರಾಜಕೀಯ ಅಂದ ಮೇಲೆ ಹಿರಿತನ ಬರುತ್ತೆ. ಕೆಲವೊಮ್ಮೆ ರಾಜಕೀಯದಲ್ಲಿ ಏನೂ ಮಾಡಲು ಆಗಲ್ಲ ಎಂದು ತಿಳಿಸಿದ್ದಾರೆ.

Exit mobile version