Site icon PowerTV

ರೆಕಾರ್ಡ್ ಲೈಕ್ಸ್ ಮೀ.. : IPLನಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ ತಲಾ ಧೋನಿ!

ಬೆಂಗಳೂರು : ‘ರೆಕಾರ್ಡ್.. ರೆಕಾರ್ಡ್.. ರೆಕಾರ್ಡ್.. ಐ ಡೋಂಟ್ ಲೈಕ್ ಇಟ್. ಐ ಅವಾಯ್ಡ್! ಬಟ್, ರೆಕಾರ್ಡ್ ಲೈಕ್ಸ್ ಮೀ.. ಐ ಕಾಂಟ್ ಅವಾಯ್ಡ್.!’

ಯೆಸ್.. ಕೆಜಿಎಫ್ ವರ್ಷನ್ ನ ಈ ಡೈಲಾಗ್​ ತಲಾ ಧೋನಿಗೆ ತುಂಬಾನೇ ಹೇಳಿಮಾಡಿಸಿದಂತಿದೆ. ಏಕೆಂದರೆ ಧೋನಿ ಆಡುವ ಪ್ರತಿ ಪಂದ್ಯದಲ್ಲೂ ಹೊಸ ಇತಿಹಾಸ ಸೃಷ್ಟಿಸುತ್ತಿದ್ದಾರೆ. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಮಹೇಂದ್ರ ಸಿಂಗ್ ಧೋನಿ ಇದೀಗ ಮತ್ತೊಂದು ಹೊಸ ದಾಖಲೆ ನಿರ್ಮಿಸಲಿದ್ದಾರೆ.

ನಾಳೆ ಅಹಮದಾಬಾದ್‌ನಲ್ಲಿ 16ನೇ ಐಪಿಎಲ್ ಫೈನಲ್ ನಡೆಯಲ್ಲಿದ್ದು, ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಸೆಣಸಾಡಲಿವೆ. ತಲಾ ಧೋನಿ ಫೈನಲ್ ನಲ್ಲಿ ಆಡುವ ಮೂಲಕ 250 ಪಂದ್ಯಗಳನ್ನು ಪೂರ್ಣಗೊಳಿಸಿದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ. ಇನ್ನೂ, ಐಪಿಎಲ್ ಉದ್ಘಾಟನಾ ಪಂದ್ಯ ಆಡಿದ್ದ ಈ ಎರಡು ತಂಡಗಳೇ ಫೈನಲ್‌ ನಲ್ಲಿ ಕಾದಾಡುತ್ತಿರುವುದು ಮತ್ತೊಂದು ವಿಶೇಷ.

249 ಪಂದ್ಯ 5,082 ರನ್

ಐಪಿಎಲ್ ನಲ್ಲಿ ಈವರೆಗೆ ಚೆನ್ನೈ ನಾಯಕ ಎಂ.ಎಸ್ ಧೋನಿ 249 ಪಂದ್ಯಗಳನ್ನಡಿದ್ದಾರೆ. 34.09 ರನ್ ಸರಾಸರಿಯಲ್ಲಿ 5,082 ರನ್ ಗಳಿಸಿದ್ದಾರೆ. ಇನ್ನೂ ಮುಂಬೈ ನಾಯಕ ರೋಹಿತ್ ಶರ್ಮಾ 243 ಪಂದ್ಯಗಳನ್ನಾಡಿ ಧೋನಿ ನಂತರದ ಸ್ಥಾನದಲ್ಲಿದ್ದಾರೆ. ಆರ್ ಸಿಬಿ ಆಟಗಾರ ದಿನೇಶ್ ಕಾರ್ತಿಕ್ 242 ಪಂದ್ಯ ಆಡಿದ್ದು ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : 14 ಸೀಸನ್, 12 ಪ್ಲೇಆಫ್, 9 ಫೈನಲ್ಸ್, 4 ಟ್ರೋಫಿ, ಒಬ್ಬ ಕ್ಯಾಪ್ಟನ್ = ಎಂ.ಎಸ್ ಧೋನಿ

9 ಬಾರಿ ಫೈನಲ್ ಆಡಿರುವ ಧೋನಿ

ಎಂ.ಎಸ್ ಧೋನಿ ಈವರೆಗೆ ಐಪಿಎಲ್ ನಲ್ಲಿ 9 ಬಾರಿ ಫೈನಲ್ ಆಡಿದ್ದಾರೆ. ಧೋನಿ ಸತತ ಮೂರು ಬಾರಿ ಐಪಿಎಲ್ ಫೈನಲ್ ನಲ್ಲಿ ಆಡಿದ ಆಟಗಾರ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದಾರೆ. 2010, 2011, 2012, 2013 ರಲ್ಲಿ ಫೈನಲ್ ಆಡಿದ್ದಾರೆ. ಇನ್ನೂ ಗುಜರಾತ್ ಬ್ಯಾಟರ್ ಶುಭಮನ್ ಗಿಲ್ ನಾಳಿನ ಫೈನಲ್ ಆಡುವ ಮೂಲಕ ಧೋನಿ ನಂತರ ಸತತ ಮೂರು ಬಾರಿ ಐಪಿಎಲ್ ಫೈನಲ್ ಆಡಿದ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ. ಗಿಲ್ 2021(ಕೆಕೆಆರ್), 2022(ಗುಜರಾತ್) ಹಾಗೂ ನಾಳೆ (2023) ಚೆನ್ನೈ ವಿರುದ್ಧ ಫೈನಲ್ ಆಡಲಿದ್ದಾರೆ.

ಅತಿ ಹೆಚ್ಚು ಪಂದ್ಯ ಆಡಿದವರು

ಎಂ.ಎಸ್ ಧೋನಿ : 249

ರೋಹಿತ್ ಶರ್ಮಾ : 243

ದಿನೇಶ್ ಕಾರ್ತಿಕ್ : 242

ವಿರಾಟ್ ಕೊಹ್ಲಿ : 237

ರವೀಂದ್ರ ಜಡೇಜಾ : 225

ಶಿಖರ್ ಧವನ್ : 217

ಸುರೇಶ್ ರೈನಾ : 217

ರಾಬಿನ್ ಉತ್ತಪ್ಪ : 205

ಅಂಬಟಿ ರಾಯುಡು : 203

Exit mobile version