Site icon PowerTV

ಸಿದ್ದರಾಮಯ್ಯ ಸಂಪುಟಕ್ಕೆ ಸೇರಲಿದ್ದಾರೆ 24 ಸಚಿವರು: ಇಂದು ಪ್ರಮಾಣವಚನ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸೇರಲಿರುವ 24 ಮಂದಿ ಸಚಿವರ ಪಟ್ಟಿ  ಅಂತಿಮಗೊಂಡಿದ್ದು, ಇಂದು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಹೌದು, ದೆಹಲಿಯಲ್ಲಿ ಹೈಕಮಾಂಡ್​ ನಾಯಕರ ಜೊತೆ ನಡೆದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಭೆ ಯಶಸ್ವಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸೇರಲಿರುವ 24 ಮಂದಿ ಸಚಿವರ ಪಟ್ಟಿ ಅಂತಿಮಗೊಂಡಿದೆ.

ಇನ್ನೂಇಂದು (ಮೇ.27) ಬೆಳಗ್ಗೆ 11.45ಕ್ಕೆ ರಾಜಭವನದ ಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಖ್ಯಮ೦ತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಒಳಗೊಂಡ ಹಾಲಿ ಅಸ್ತಿತ್ವವಿರುವ 10 ಮಂದಿಯ ಸಚಿವ ಸಂಪುಟಕ್ಕೆ ಶನಿವಾರ 24 ಮಂದಿ ಸೇರ್ಪಡೆಯಾದರೆ ಜೋಡೆತ್ತು ಸರ್ಕಾರದ ಪರಿಪೂರ್ಣ ಸಂಪುಟ ರಚನೆಯಾದಂತೆ ಆಗುತ್ತದೆ.

Exit mobile version