Site icon PowerTV

ಡಬಲ್ ಸ್ಟೇರಿಂಗ್ ಸರ್ಕಾರದಲ್ಲಿ ಸಿಎಂ ಸೈಲೆಂಟ್ ಡಿಸಿಎಂ ವೈಲೆಂಟ್ ; ಆರ್. ಅಶೋಕ್ ಕಿಡಿ

ಬೆಂಗಳೂರು: ಚುನಾವಣೆಗೆ ಮುಂಚೆ ನೀಡಿದ ಭರವಸೆಗಳ ಗ್ಯಾರಂಟಿ ಕಾರ್ಡ್​​​ಗಳನ್ನು ರಾಜ್ಯದ ಪ್ರತಿ ಮನೆಗೆ ವಿತರಿಸಿ, ಕಾಂಗ್ರೆಸ್ ಅಧಿಕಾರವಹಿಸಿಕೊಂಡ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲಿ ಐದು ಉಚಿತ ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಘೋಷಿಸಿದ್ದರು.ಈಗ ಪಾಲಿಸಲೇಬೇಕು ಎಂದು ಮಾಜಿ ಸಚಿವ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಹೌದು, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್​. ಅಶೋಕ್​ ಕಾಂಗ್ರೆಸ್​ ನೀಡಿದ ಭರವಸೆಗಳನ್ನೂ ಈಡೇರಿಸದೇ ಇದ್ರೆ ಜನರು ಈ ಡಬಲ್​ ಸ್ಟೇರಿಂಗ್ ಸರ್ಕಾರವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಅತ್ತೆ ಮನೆ, ಸೊಸೆ ಮನೆ ಹೋಗುವಾಗ ಎಲ್ಲಾ ಉಚಿತ ಉಚಿತ ಎಂದು ಡಿಕೆಶಿ ಭಾಷಣ ಮಾಡಿದ್ರು…
ಹೋಗ್ಲಿ ಕಂಡಿಶನ್ ಅಪ್ಲೈ ಎಂದು ಹೇಳಿದ್ರಾ  ಆಗ ಕಾರ್ಡ್ ರೆಡಿ ಮಾಡುವಾಗ ಜ್ಞಾನ ಇರಲಿಲ್ಲವೇ ..? ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಎಲ್ಲಾರೂ ಬಂದು ಒಂದೊಂದು ಗ್ಯಾರಂಟಿ ಕಾರ್ಡ್ ಹಿಡಿದ್ದು, ಸರ್ಕಾರ ಬಂದು 24 ಗಂಟೆ ಒಳಗೆ ಗ್ಯಾರಂಟಿ ಈಡೇರಿಸುತ್ತೇವೆ. ಅದವರುಬ ಈಗ ಸರ್ಕಾರ ಬಂದು 240 ಗಂಟೆಗೂ ಜಾಸ್ತಿ ಆಯ್ತು ಯಾವುದು ಕೂಡ ಆಗಿಲ್ಲ ಇನ್ನೂ ದಾರಿ ಮೇಲೆ ಹೋಗೋರಿಗೆಲ್ಲಾ ಗ್ಯಾರಂಟಿ ಕೊಡೊಕೆ ಆಗತ್ತಾ ಎಂದು ಡಿಸಿಎಂ ಹೇಳ್ತಾ ಇದ್ದಾರೆ..
ಆಗ ದಾರಿ ಮೇಲೆ ಹೋಗೋರಿಗೆಲ್ಲಾ ವೋಟ್ ಹಾಕಿಸಿಕೊಂಡಿಲ್ವಾ..? ಈಗ ಅವರಿಗೆ ಅವಮಾನ ಮಾಡ್ತಾ ಇದ್ದೀರಾ ?  ನಾಚಿಕೆ ಆಗಲ್ವಾ ನಿಮಗೆ ಎಂದು ವಾಗ್ದಾಳಿ ಮಾಡಿದ್ದಾರೆ.

 

Exit mobile version