Site icon PowerTV

ಕನಿಷ್ಠ ಐವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು : ಬಸವಜಯ ಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು : ಚುನಾವಣೆಯಲ್ಲಿ 12 ಜನ ಪಂಚಮಸಾಲಿ ಶಾಸಕರು ಆಯ್ಕೆಯಾಗಿದ್ದಾರೆ. ಕನಿಷ್ಠ 5 ಜನ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯ ಮಾಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಂಚಮಸಾಲಿ ಸಮುದಾಯದ ಶಾಸಕರಾದ ವಿಜಯ ಕಾಶಾಪ್ಪನವರ್, ವಿನಯ್ ಕುಲಕರ್ಣಿ, ಲಕ್ಷ್ಮಿ ಹೆಬ್ವಾಳ್ಕರ್ ಹೆಸರು ಸೇರಿಸಲು ಒತ್ತಾಯ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.

ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಇಡೀ ಸಮುದಾಯ ಮತ ಹಾಕಿದೆ. ಮುಂಬರುವ ಲೋಕಸಭಾ ಚುನಾವಣಾ ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ನೀಡಬೇಕು ಅಂತಾ ಎಚ್ಚರಿಕೆ ಕೊಡ್ತಿದ್ದೇವೆ. ಸಮುದಾಯಕ್ಕೆ ಎಡವಟ್ಟು ಆದ್ರೆ, ಬಹುತೇಕ ಪಕ್ಷದ ಮೇಲೆ ಅಸಮಾಧಾನ ಎದುರಾಗಬಹುದು. ಈ ಕುರಿತು ಪಕ್ಷ ಎಚ್ಚರಿಕೆಯ ನಡೆಯನ್ನು ಕಾಂಗ್ರೆಸ್ ಇಡಬೇಕು ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ : ಮೇ 27ರಂದು ಬೆ.11.45ಕ್ಕೆ ನೂತನ ಸಚಿವರ ಪ್ರಮಾಣವಚನ

ಒಬಿಸಿ ಮೀಸಲಾತಿ ಹಕ್ಕೊತ್ತಾಯ

ಕಾಂಗ್ರೆಸ್ ಸರಕಾರಕ್ಕೆ ಮನವಿ ಮಾಡ್ತೀದ್ದೇವೆ. ಇಡೀ ರಾಜ್ಯದ್ಯಾಂತ ಸಮುದಾಯದವರು ಕರೆ ಮಾಡ್ತಿದ್ದಾರೆ. ಬೆಂಗಳೂರು, ಹುನುಗುಂದ, ಧಾರವಾಡ, ಬಾಗಲಕೋಟೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಮೀಸಲಾತಿಗಾಗಿ ಕೂಡಲ ಸಂಗಮದ ಪೀಠದಿಂದ ಹೋರಾಟ ಆರಂಭವಾಗಿತ್ತು. ಕೇಂದ್ರ ಒಬಿಸಿ ಮೀಸಲಾತಿ ಹಕ್ಕೊತ್ತಾಯ ಇದೆ ಎಂದು ಶ್ರೀಗಳು ತಿಳಿಸಿದ್ದಾರೆ.

ಸಚಿವ ಸ್ಥಾನದ ರೇಸ್ ನಲ್ಲಿರುವವರು

ಲಿಂಗಾಯತ ಪಂಚಮಸಾಲಿ ಸಮಾಜದ ಒತ್ತಾಯದಂತೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ ಕರ್ ಒಳಗೊಂಡಂತೆ ಒಟ್ಟು ಐದು ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಪಂಚಮಸಾಲಿ ಸಮುದಾಯ ಒತ್ತಾಯಿಸಿದೆ.

Exit mobile version