Site icon PowerTV

JDS ವಿಸರ್ಜನೆ ಯಾವಾಗ? BJP ಸೋಲಿನ ಹೊಣೆ ಯಾರದ್ದು? : ಕಾಂಗ್ರೆಸ್ ಲೇವಡಿ

ಬೆಂಗಳೂರು : ಕಾಂಗ್ರೆಸ್ ಉಚಿತ ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಮಾಜಿ ಸಿಎಂ ಕುಮಾರಸ್ವಾಮಿಗೆ ರಾಜ್ಯ ಕಾಂಗ್ರೆಸ್ ಟಕ್ಕರ್ ಕೊಟ್ಟಿದೆ.

ಈ ಕುರಿತು ಟ್ವೀಟ್​ ಮೂಲಕ ರಾಜ್ಯ ಕಾಂಗ್ರೆಸ್​, ಕುಮಾರಸ್ವಾಮಿಗೆ ತಿರುಗೇಟು ನೀಡಿದೆ. ಜೆಡಿಎಸ್ ಪಕ್ಷದ ವಿಸರ್ಜನಾ ಕಾರ್ಯಕ್ರಮದ ಮುಹೂರ್ತ ಯಾವಾಗ ಹೇಳಿ? ಎಂದು ಕುಮಾರಸ್ವಾಮಿಯವರ ಕಾಲೆಳೆದಿದೆ.

ಟ್ವೀಟ್ ನಲ್ಲಿ ಏನಿದೆ?

‘​ನಾವು ಅರ್ಹ ಫಲಾನುಭವಿಗಳಿಗೆ ನಮ್ಮ ಗ್ಯಾರಂಟಿಗಳನ್ನು ಜಾರಿಗೊಳಿಸುವುದು ನಿಶ್ಚಿತ. ಕುಮಾರಸ್ವಾಮಿಯವರೇ, ಆ ಚಿಂತೆ ಬಿಡಿ. ಜೆಡಿಎಸ್ ಪಕ್ಷದ ವಿಸರ್ಜನಾ ಕಾರ್ಯಕ್ರಮದ ಮುಹೂರ್ತ ಯಾವಾಗ ಹೇಳಿ? ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ : ಲೋಕಸಭಾ ಚುನಾವಣೆ ಆದ್ಮೇಲೆ ಸರ್ಕಾರ ನಡೆಯುತ್ತೋ, ಇಲ್ವೋ? : ಹೆಚ್.ಡಿ ಕುಮಾರಸ್ವಾಮಿ ಟಕ್ಕರ್

ಬಿಜೆಪಿ ಸೋಲಿನ ಹೊಣೆ ಯಾರದ್ದು?

ಇನ್ನೂ ಬಿಜೆಪಿ ವಿರುದ್ಧವೂ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಹೊಣೆ ಹೊರುವವರು? ಹೊಣೆ ಹೊತ್ತು ರಾಜೀನಾಮೆ ಕೊಡುವವರು ಯಾರೂ ಇಲ್ಲವೇ ಬಿಜೆಪಿಯಲ್ಲಿ? ಬಿಜೆಪಿ ನಾಯಕರೇ ಸೋಲಿನ ಹೊಣೆ ಯಾರದ್ದು? ಎಂದು ಟಕ್ಕರ್ ನೀಡಿದೆ.

ಮೋದಿಯವರದ್ದೋ? ಶಾ ಅವರದ್ದೋ?

ಚುನಾವಣೆ ಸೋಲು ಅಮಿತ್ ಶಾ ಅವರದ್ದೋ? ಬಸವರಾಜ ಬೊಮ್ಮಾಯಿಯವರದ್ದೋ? ಪ್ರಧಾನಿ ನರೇಂದ್ರ ಮೋದಿಯವರದ್ದೋ? ನಳಿನ್ ಕುಮಾರ್ ಕಟೀಲರದ್ದೋ? ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಡುವವರು ಯಾರು? ಎಂದು ಪ್ರಶ್ನೆ ಮಾಡಿದೆ.

Exit mobile version