Site icon PowerTV

ಹೊಸ ಸ್ಟುಡಿಯೋಸ್​ ಆರಂಭಿಸಿದ ರಿಷಬ್​ ಶೆಟ್ಟಿ

ಬೆಂಗಳೂರ: ಕೆರಾಡಿ ಸ್ಟುಡಿಯೋಸ್‌ʼ ಮೂಲಕ ಸಿನಿಮಾರಂಗಕ್ಕೆ ರಿಷಬ್‌ ಹೊಸ ಹೆಜ್ಜೆಯಿಡುತ್ತಿದ್ದಾರೆ.

ಕಾಂತಾರದ ಬಳಿಕ ಪ್ಯಾನ್​ ಇಂಡಿಯಾ ಸ್ಟಾರ್‌ ಆದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಹೊಸತೊಂದು ಹೆಜ್ಜೆಯಿಡುವ ಮೂಲಕ ಹೊಸ ಕನಸಿನ ಯಾತ್ರೆಯನ್ನು ಶುರು ಮಾಡಲು ಹೊರಟಿದ್ದಾರೆ.

ಹೌದು, ಹೊಸ ಸ್ಟುಡಿಯೋಸ್ ಆರಂಭಿಸಿದ ರಿಷಬ್ ಶೆಟ್ಟಿ ನಟ ರಿಷಬ್ ಶೆಟ್ಟಿ ಅವರು ತಮ್ಮದೇ ಆದ ‘ಕೆರಾಡಿ ಸ್ಟುಡಿಯೋಸ್’ ಆರಂಭಿಸುವುದಾಗಿ ಘೋಷಿಸಿದ್ದಾರೆ. ಈ ಕುರಿತು ಸೋಷಿಯಲ್​ ಮಿಡೀಯಾದಲ್ಲಿ ರಿಷಬ್​ ಪೋಸ್ಟ್ ಮಾಡಿದ್ದು, ಸಿನಿಮಾಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಈ ಸ್ಟುಡಿಯೋಸ್ ಮೂಲಕ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಉತ್ತಮ ಚಿತ್ರಗಳು ಮತ್ತು ಪ್ರೇಕ್ಷಕರ ಸೇತುವೆ ಆಗಬೇಕೆಂಬ ಉದ್ದೇಶದಿಂದ ‘ಕೆರಾಡಿ ಸ್ಟುಡಿಯೋಸ್’ ಆರಂಭಿಸಲಾಗಿದೆ. ‘ಕೆರಾಡಿ’ ನಾನು ಹುಟ್ಟಿ ಬೆಳೆದ ಊರು, ನನ್ನ ಹೃದಯಕ್ಕೆ ಹತ್ತಿರವಾಗಿದೆ ಎಂದು ಅವರು ತಿಳಿಸಿದ್ದಾರೆ.

Exit mobile version