Site icon PowerTV

ಈ.. ಸರ್ಕಾರ ಹೋಗುವ ದಾರಿ ನೋಡಿದ್ರೆ, ಬಹಳ ದಿನ ಉಳಿಯಲ್ಲ : ಬೊಮ್ಮಾಯಿ ಲೇವಡಿ

ಬೆಂಗಳೂರು : ಈ ಸರ್ಕಾರ ಹೋಗುವಂತ ದಾರಿ ನೋಡಿದರೆ ಬಹಳ ದಿನ‌ ಉಳಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿರುವ ಬೊಮ್ಮಾಯಿ, ನಾಲ್ಕೈದು ತಿಂಗಳಲ್ಲಿ ರಾಜ್ಯದ ರಾಜಕೀಯ ಚಿತ್ರಣ ಬದಲಾವಣೆಯಾಗಲಿದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಸರ್ಕಾರ ಹೋಗುವಂತ ದಾರಿ ನೋಡಿದರೆ ಬಹಳ ದಿನ‌ ನಡೆಯಲ್ಲ. ಬಿಜೆಪಿ ನಾಯಕರು, ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್​​ ಪಕ್ಷದವರಿಗೆ ನಮ್ಮ ಕಾರ್ಯಕರ್ತರು ತಲೆಬಾಗುವ ಪ್ರಶ್ನೆ ಇಲ್ಲ ಎಂದು ಗುಡುಗಿದ್ದಾರೆ.

ಇದನ್ನೂ ಓದಿ : ಲೋಕಸಭಾ ಚುನಾವಣೆ ಆದ್ಮೇಲೆ ಸರ್ಕಾರ ನಡೆಯುತ್ತೋ, ಇಲ್ವೋ? : ಹೆಚ್.ಡಿ ಕುಮಾರಸ್ವಾಮಿ ಟಕ್ಕರ್

25ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ

ನಾವು ನಮ್ಮ ಹಣದಿಂದ ರಾಜಕೀಯ ಮಾಡುತ್ತಿದ್ದೇವೆ. ನಾವು ತಂದ ಜನಪರ ಕಾನೂನು ರದ್ದುಪಡಿಸಲು ಹೊರಟಿದ್ದಾರೆ. ಎಲ್ಲೋ ಅಲ್ಪಸ್ವಲ್ಪ ವ್ಯತ್ಯಾಸ ಆಗಿದಕ್ಕೆ ನಾವು ಸೋತಿರಬಹುದು. ಆದರೆ, ನಾವು ಸ್ವಾಭಿಮಾನ ಕಳೆದುಕೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸುತ್ತೇವೆ. ರಾಜ್ಯದಲ್ಲಿ ಮತ್ತೆ 25ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಿಜವಾದ ಬಣ್ಣ ಬಯಲು

ಕಾಂಗ್ರೆಸ್ ನವರು ಉಚಿತ ಗ್ಯಾರಂಟಿ ಘೋಷಿಸಿದ್ದರು. ಮೊದಲ ಸಂಪುಟ ಸಭೆಯಲ್ಲಿ ಗ್ಯಾರಂಟಿ ಆದೇಶ ಮಾಡಿ ಮನೆ ಮನೆಗೆ ಮುಟ್ಟಿಸುತ್ತೇವೆ ಅಂದಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮೊದಲ ಅರ್ಧಗಂಟೆ ಈ ವಿಷಯಕ್ಕೆ ಬರಲಿಲ್ಲ. ಕೊನೆಗೆ ಮಾತನಾಡುವಾಗ ತಡವರಿಸಿದರು. ಕಾಂಗ್ರೆಸ್ ನಿಜವಾದ ಬಣ್ಣ ಈಗ ಬಯಲಾಗುತ್ತಿದೆ ಎಂದು ಕುಟುಕಿದ್ದಾರೆ.

Exit mobile version