Site icon PowerTV

ಮಧ್ವಾಲ್ ಮ್ಯಾಜಿಕ್ ಗೆ ‘ಕನ್ನಡಿಗ ಕುಂಬ್ಳೆ’ ದಾಖಲೆ ಉಡೀಸ್..!

ಬೆಂಗಳೂರು : ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ತೂಫಾನ್ ಬೌಲಿಂಗ್ ಮಾಡಿದ ಯುವ ವೇಗಿ ಆಕಾಶ್ ಮಧ್ವಾಲ್ ದಿಗ್ಗಜರ ದಾಖಲೆ ಉಡೀಸ್ ಮಾಡಿದ್ದಾರೆ.

ಹೌದು, ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ಬೌಲರ್ ಕಾಣಿಕೆಯಿಂದ ರೋಹಿತ್ ಪಡೆ ಫೈನಲ್ ಪ್ರವೇಶಿಸುವ ಅವಕಾಶ ಪಡೆಯಿತು. ಇದಲ್ಲದೆ, ಮಧ್ವಾಲ್ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಆಕಾಶ್ ಮಧ್ವಾಲ್ ಐಪಿಎಲ್ ಪ್ಲೇಆಫ್ ನಲ್ಲಿ 5 ರನ್ ನೀಡಿ 5 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾಜಿ ವೇಗಿ ಬೋಲಿಂಗರ್ 13 ರನ್ ನಿಡಿ 4 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ : ವಿರಾಟ್ ವೀರಾವೇಶ : ‘ಬ್ಯಾಕ್ ಟು ಬ್ಯಾಕ್ ಶತಕ’ ಸಿಡಿಸಿದ ಕಿಂಗ್ ಕೊಹ್ಲಿ

ಕುಂಬ್ಳೆ ದಾಖಲೆ ಸರಿಗಟ್ಟಿದ ಆಕಾಶ್

ಇನ್ನೂ ಆಕಾಶ್ ಮಧ್ವಾಲ್ ಆರ್ ಸಿಬಿ ತಂಡದ ಮಾಜಿ ನಾಯಕ ಕನ್ನಡಿಗ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 2009ರಲ್ಲಿ ಕುಂಬ್ಳೆ ಅವರು 5 ರನ್ ನೀಡಿ 5 ವಿಕೆಟ್ ಪಡೆದಿದ್ದರು. ಇದೀಗ ಆಕಾಶ್ ಮಧ್ವಾಲ್ 5 ರನ್ ಗೆ 5 ವಿಕೆಟ್ ಪಡೆದು ಕುಂಬ್ಳೆ ದಾಖಲೆ ಸರಿಗಟ್ಟಿದ್ದಾರೆ.

ಇನ್ನೂ ಸತತ ಎರಡು ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಹೈದರಾಬಾದ್ ವಿರುದ್ಧ 4 ವಿಕೆಟ್ ಹಾಗೈ ನಿನ್ನೆ ನಡೆದ ಮುಂಬೈ ವಿರುದ್ದ 5 ವಿಕೆಟ್ ಪಡೆದರು. 5 ವಿಕೆಟ್ ಗಳೊಂದಿಗೆ ಅನ್ ಕ್ಯಾಪ್ಡ್ ಆಟಗಾರರ (ಬೌಲರ್) ಪಟ್ಟಿಯಲ್ಲಿ ಆಕಾಶ್ ಮಧ್ವಾಲ್ ಮೊದಲ ಸ್ಥಾನ ಅಲಂಕರಿಸಿದ್ದಾರೆ.

Exit mobile version