Site icon PowerTV

ಮಧ್ವಾಲ್ ‘ತೂಫಾನ್’ ಬೌಲಿಂಗ್ : ಲಕ್ನೋ ವಿರುದ್ಧ ಮುಂಬೈಗೆ ಭರ್ಜರಿ ಗೆಲುವು

ಬೆಂಗಳೂರು : ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಲಕ್ನೋ ವಿರುದ್ಧ 81 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಮುಂಬೈ ಫೈನಲ್ ಪ್ರವೇಶಿಸುವ ಚಾನ್ಸ್ ಪಡೆದುಕೊಂಡಿದೆ.

ಮೊದಲು ಬ್ಯಾಟ್ ಮಾಡಿದ್ದ ಮುಂಬೈ 8 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತ್ತು. ಇದನ್ನು ಚೇಸ್ ಮಾಡಲು ಹೊರಟ ಲಕ್ನೋ 101 ರನ್‌ ಗಳಿಗೆ ಆಲ್‌ಔಟ್‌ ಆಗಿದೆ. ಲಕ್ನೋ ಪರ ಸ್ಟೋನಿಸ್ ಮಾತ್ರ 38 ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್ ಗಳು ಉತ್ತಮ ಪ್ರದರ್ಶನ ನೀಡಲಿಲ್ಲ.

ಲಕ್ನೋಗೆ ಆರಂಭಿಕ ಆಘಾತ

183 ರನ್ ಟಾರ್ಗೆಟ್ ಬೆನ್ನಟ್ಟಿರುವ ಲಕ್ನೋಗೆ ಮುಂಬೈ ಬೌಲರ್ ಗಳು ಆರಂಭಿಕ ಆಘಾತ ನೀಡಿದರು. ಎರಡನೇ ಓವರ್‌ ನಲ್ಲಿ ಪ್ರೇರಕ್ ಮಂಕಡ್ ಔಟ್ ಆದರು. ಕೈಲ್ ಮೇಯರ್ಸ್ ಸಹ ಕ್ರಿಸ್ ಜೋರ್ಡಾನ್ ಗೆ ವಿಕೆಟ್ ಒಪ್ಪಿಸಿದರು.

ಮುಂಬೈ ಪರ ಆಕಾಶ್ ಮಧ್ವಾಲ್ 5 ವಿಕೆಟ್ ಪಡೆದು ಮಿಂಚಿದರು. ಈ ಗೆಲುವಿನೊಂದಿಗೆ ಮುಂಬೈ ತಂಡ ಈಗ 2ನೇ ಕ್ವಾಲಿಫೈಯರ್ ಪ್ರವೇಶಿಸಿದೆ. ಮೇ 26ರಂದು ಅಹಮದಾಬಾದ್ ನಲ್ಲಿ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದ್ದು, ಗುಜರಾತ್ ತಂಡದ ವಿರುದ್ಧ ಮುಂಬೈ ಸೆಣಸಲಿದೆ.

Exit mobile version