Site icon PowerTV

ಲಕ್ನೋಗೆ ಗೆಲುವಿಗೆ 183 ರನ್ ಟಾರ್ಗೆಟ್ : ಎರಡು ವಿಕೆಟ್ ಪತನ

ಬೆಂಗಳೂರು : ಐಪಿಎಲ್-2023ರ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಗೆಲುವಿಗೆ ಮುಂಬೈ ಇಂಡಿಯನ್ಸ್ 183 ರನ್ ಟಾರ್ಗೆಟ್ ನೀಡಿದೆ.

ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿತು.

ಮುಂಬೈ ಪರ ಇಶಾನ್ 15, ನಾಯಕ ರೋಹಿತ್ 11, ಗ್ರೀನ್ 41, ಸೂರ್ಯಕುಮಾರ್ 33, ತಿಲಕ್ ವರ್ಮಾ 26, ಟೀಮ್ ಡೇವಿಡ್ 13, ವಧೇರಾ 23 ರನ್ ಗಳಿಸಿದರು. ಲಕ್ನೋ ಪರ ನವೀನ್ 4, ಯಶ್ 3, ಮೊಕ್ಸಿನ್ ಖಾನ್ 1 ವಿಕೆಟ್ ಪಡೆದರು.

ಲಕ್ನೋಗೆ ಆರಂಭಿಕ ಆಘಾತ

183 ರನ್ ಟಾರ್ಗೆಟ್ ಬೆನ್ನಟ್ಟಿರುವ ಲಕ್ನೋಗೆ ಆರಂಭಿಕ ಆಘಾತ ಎದುರಾಗಿದೆ. ಎರಡನೇ ಓವರ್‌ ನಲ್ಲಿ ಲಕ್ನೋದ ಮೊದಲನೇ ವಿಕೆಟ್ ಪತನವಾಯಿತು. ಆಕಾಶ್ ಮಧ್ವಲ್ ಪ್ರೇರಕ್ ಮಂಕಡ್ ಅವರನ್ನು ಔಟ್ ಮಾಡಿದರು. ಬಳಿಕ ಕ್ರಿಸ್ ಜೋರ್ಡಾನ್ ಕೈಲ್ ಮೇಯರ್ಸ್ ವಿಕೆಟ್ ಉರುಳಿಸಿದರು.

ಇಂದಿನ ಪಂದ್ಯ ಗೆದ್ದ ತಂಡ 2ನೇ ಕ್ವಾಲಿಫಾಯರ್ ಗೆ ಅರ್ಹತೆ ಪಡೆಯಲಿದೆ. ಮೇ 26ರಂದು ಅಹಮದಾಬಾದ್ ನಲ್ಲಿ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದ್ದು, ಗುಜರಾತ್ ತಂಡದ ವಿರುದ್ಧ ಮುಖಾಮುಖಿಯಾಗಲಿದೆ. ಇಂದು ಸೋಲುವ ತಂಡ ಐಪಿಎಲ್ ಟೂರ್ನಿಯಿಂದ ಹೊರ ಬೀಳಲಿದೆ.

ಮುಂಬೈ : 182/8

ರೋಹಿತ್ ಶರ್ಮಾ : 11(10)

ಇಶಾನ್ ಕಿಶನ್ : 15(12)

ಕ್ಯಾಮರೋನ್ ಗ್ರೀನ್ : 41(23)

ಸೂರ್ಯಕುಮಾರ್ ಯಾದವ್ : 33(20)

ತಿಲಕ್ ವರ್ಮಾ : 26(22)

ಟಿಮ್ ಡೇವಿಡ್ :12(13)

ವದೇರಾ : 23 (12)

ಕ್ರಿಸ್ ಜೋರ್ಡಾನ್ : 4(7)

ಹೃತಿಕ್ ಶೋಕೀನ್ : 0(1)

ಲಕ್ನೋ ಬೌಲಿಂಗ್

ನವೀನ್ ಉಲ್ ಹಕ್ : 04/38/04

ಯಶ್ ಠಾಕೂರ್ : 04/34/03

ಮೊಹ್ಸಿನ್ ಖಾನ್ : 03/24/01

ಕೃನಾಲ್ ಪಾಂಡ್ಯ : 04/38/00

ಕೃಷ್ಣಪ್ಪ ಗೌತಮ್ : 01/08/00

ರವಿ ಬಿಷ್ಣೋಯ್ : 04/30/00

Exit mobile version