Site icon PowerTV

ಪೊಲೀಸರು ಅರೆಸ್ಟ್ ಮಾಡುವಾಗ ಮಹಡಿ ಮೇಲಿಂದ ಬಿದ್ದು ಆರೋಪಿ ಸಾವು

ಬೆಂಗಳೂರು : ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಲು ಹೋಗಿದ್ದಾಗ ಮಹಡಿ ಮೇಲಿಂದ ಜಿಗಿದು ಬಿದ್ದು ಆರೋಪಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಿಲಿಕಾನ್​ ಸಿಟಿಯ ಬೊಮ್ಮನಹಳ್ಳಿ ವ್ಯಾಪ್ತಿಯ ಬೇಗೂರು ರಸ್ತೆಯ ಬಳಿ ಘಟನೆ ಸಂಭವಿಸಿದ್ದು, ಮೊಹಮ್ಮದ್ ತಾಹೀರ್ ಹುಸೇನ್ (31) ಮೃತ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಹಮ್ಮದ್ ತಾಹೀರ್ ಹುಸನ್ ದೂರಿನ ಹಿನ್ನೆಲೆಯಲ್ಲಿ ನಾಲ್ವರ ಪೊಲೀಸರ ತಂಡ ವಿಚಾರಣೆ ನಡೆಸಲು ಆರೋಪಿ ಮನೆಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ನಾಲ್ಕನೇ ಮಹಡಿಯ ಟೇರೆಸ್​ನಲ್ಲಿದ್ದ ಹುಸೇನ್ ಭಯಭೀತಿಯಿಂದ ಮಹಡಿಯಿದ್ದ ಜಿಗಿದು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : ಕೆಲಸಕ್ಕೆ ಹೋಗ್ತೀನಿ ಎಂದ ಸೊಸೆ : ಮುಂದೆ ಆಗಿದ್ದು ಅಮಾನವೀಯ

ಬೆತ್ತಲೆಯಾಗಿ ಮಹಡಿಯಿಂದ ಬಿದ್ದು ಸಾವು

ಇನ್ನು ಹುಸೇನ್ ಬೆತ್ತಲೆಯಾಗಿ ನಾಲ್ಕನೇ ಮಹಡಿಯಿಂದ ಬಿದ್ದು ಸಾವಿನ್ನಪ್ಪಿದ್ದು, ಇದು ಅನುಮಾನ ಹುಟ್ಟುಹಾಕಿದೆ. ವಶಕ್ಕೆ ಪಡೆಯಲು ಬಂದಿದ್ದ ಬೊಮ್ಮನಹಳ್ಳಿ ಠಾಣೆಯ ನಾಲ್ವರು ಸಿಬ್ಬಂದಿ ಹುಸೇನ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹುಸೇನ್​ ಪೋಷಕರು ಪೊಲೀಸರ ವಿರುದ್ಧ ಆರೋಪ ಮಾಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಬಳಿಕ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದಿದ್ದಾರೆ.

Exit mobile version