Site icon PowerTV

ಸಿಎಂ ಸಿದ್ದರಾಮಯ್ಯಗೆ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಶುಭ ಹಾರೈಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾಡೋಜ ಹಾಗೂ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರು ಮಂಗಳವಾರ ಭೇಟಿ ಮಾಡಿ ಶುಭ ಹಾರೈಸಿದರು.‌

ಹೌದು, ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾಡಿನಲ್ಲಿ ಮಳೆ, ಬೆಳೆ ಸಮೃದ್ಧವಾಗಲಿ. ಉತ್ತಮ ಆಡಳಿತ ನಡೆಸುವಂತಾಗಲಿ ಎಂದು ತಿಮ್ಮಕ್ಕ ಅವರು ಶುಭ ಹಾರೈಸಿದರು.

ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ, ಸರ್ಕಾರ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ಸಿದ್ದರಾಮಯ್ಯ ಅವರು ತಿಮ್ಮಕ್ಕ ಅವರಿಗೆ ತಿಳಿಸಿದರು.

Exit mobile version