Site icon PowerTV

UPSC Exam Results: ಯುಪಿಎಸ್​ಸಿ ಫಲಿತಾಂಶ ಪ್ರಕಟ; ನಂ 1 ರ‍್ಯಾಂಕ್‌ ಪಡೆದ ಇಶಿತಾ ಕಿಶೋರ್ 

ಬೆಂಗಳೂರು: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನಾಗರಿಕ ಸೇವಾ ಅಂತಿಮ ಪರೀಕ್ಷೆಯ 2022ರ ಫಲಿತಾಂಶವನ್ನು ಇಂದು ಪ್ರಕಟಿಸಿದೆ.

ಹೌದು, UPSC ಅಧಿಕೃತ ವೆಬ್​ಸೈಟ್​ ನಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ವ್ಯಕ್ತಿತ್ವ ಪರೀಕ್ಷೆಯಲ್ಲಿ(Personality Test) ಕಾಣಿಸಿಕೊಂಡ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಈ  ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು – upsc.gov.in.

UPSC CSE ಪೂರ್ವಭಾವಿ ಪರೀಕ್ಷೆಯನ್ನು ಜೂನ್ 5, 2022 ರಂದು ನಡೆಸಲಾಯಿತು ಮತ್ತು ಪರೀಕ್ಷೆಯ ಫಲಿತಾಂಶಗಳನ್ನು ಜೂನ್ 22 ರಂದು ಬಿಡುಗಡೆ ಮಾಡಲಾಯಿತು. ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 16 ರಿಂದ 25 ರವರೆಗೆ ನಡೆಸಲಾಯಿತು ಮತ್ತು ಫಲಿತಾಂಶಗಳನ್ನು ಡಿಸೆಂಬರ್ 6 ರಂದು ಘೋಷಿಸಲಾಯಿತು. ಸಂದರ್ಶನಗಳು ಮೇ 18 ರಂದು ಮುಕ್ತಾಯಗೊಂಡವು.

ಇಶಿತಾ ಕಿಶೋರ್ ಅವರು ಅಖಿಲ ಭಾರತ ಪ್ರಥಮ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ನಂತರ ಸ್ಥಾನದಲ್ಲಿ ಗರಿಮಾ ಲೋಹಿಯಾ, ಉಮಾ ಹರತಿ.ಎನ್ ಮತ್ತು ಸ್ಮೃತಿ ಮಿಶ್ರಾ ಪಡೆದುಕೊಂಡಿದ್ದಾರೆ. ಮತ್ತೊಮ್ಮೆ ಮಹಿಳಾ ಅಭ್ಯರ್ಥಿಗಳು ಟಾಪರ್ ಗಳೆನಿಸಿಕೊಂಡಿದ್ದಾರೆ.

 

 

Exit mobile version