Site icon PowerTV

ಕ್ಯಾಮರೂನ್ ಗ್ರೀನ್ ‘ಸ್ಫೋಟಕ ಶತಕ’, ಮುಂಬೈಗೆ 8 ವಿಕೆಟ್ ಗಳ ಭರ್ಜರಿ ಜಯ

ಬೆಂಗಳೂರು : ಕ್ಯಾಮರೂನ್ ಗ್ರೀನ್ ಅವರ ವಿಧ್ವಂಸಕ ಬ್ಯಾಟಿಂಗ್ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಹೈದರಾಬಾದ್ ತಂಡ ನೀಡಿದ್ದ 201 ರನ್‌ ಗಳ ಗುರಿ ಬೆನ್ನಟ್ಟಿದ ಮುಂಬೈ ಆರಂಭದಲ್ಲೇ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡಿತು. ಆದರೂ, ಮುಂಬೈ ಬ್ಯಾಟರ್ ಗಳು ಆಕ್ರಮಣಕಾರಿ ಆಟಕ್ಕಿಳಿದರು.

ಕ್ಯಾಮರೂನ್ ಗ್ರೀನ್ ಅಜೇಯ 100*, ನಾಯಕ ರೋಹಿತ್ ಶರ್ಮಾ 56, ಸೂರ್ಯಕುಮಾರ್ ಅಜೇಯ 25*, ಇಶಾನ್ 14 ರನ್ ಗಳಿಸಿದರು. ಆ ಮೂಲಕ ಇನ್ನೂ 2 ಓವರ್ ಬಾಕಿ ಇರುವಾಗಲೇ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿತು.

ಹೈದರಾಬಾದ್ ಪರ ಬೌಲರ್‌ ಭುವನೇಶ್ವ‌ರ್ ಕುಮಾರ್ ಮತ್ತು ಮಯಾಂಕ್ ತಲಾ 1 ವಿಕೆಟ್ ಪಡೆದರು. ಮುಂಬೈನ ಪ್ಲೇಆಫ್ ಭವಿಷ್ಯ ಇಂದಿನ ಆರ್ ಸಿಬಿ ಪ್ರದರ್ಶನದ ಮೇಲೆ ಅವಲಂಬಿತವಾಗಿದೆ.

ಇದನ್ನೂ ಓದಿ : Virat Kohli: 4 ವರ್ಷಗಳ ಬಳಿಕ ಶತಕ ಸಿಡಿಸಿದ ಕಿಂಗ್ ಕೊಹ್ಲಿ

ಗ್ರೀನ್, ರೋಹಿತ್ ಅಬ್ಬರ

ಇನ್ನಿಂಗ್ಸ್ ಆರಂಭಿಸಿದ ಮುಂಬೈಗೆ ಇಶಾನ್ ಕಿಶನ್ ನಿರ್ಗಮನ ಆಘಾತ ಉಂಟುಮಾಡಿತು. 12 ಎಸೆತಗಳಲ್ಲಿ 14 ರನ್ ಗಳಿಸಿ ಭುವನೇಶ್ವರ್ ಕುಮಾರ್ ಗೆ ಇಶಾನ್ ವಿಕೆಟ್ ಒಪ್ಪಿಸಿದರು. ಬಳಿಕ ನಾಯಕ ರೋಹಿತ್ ಶರ್ಮಾ ಜೊತೆಗೂಡಿದ ಕ್ಯಾಮರೂನ್ ಗ್ರೀನ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು.

ಹೈದರಾಬಾದ್ ಬೌಲರ್ ಗಳನ್ನು ಬೆಂಡೆತ್ತಿದ ಹಿಟ್ ಮ್ಯಾನ್ ರೋಹಿತ್ 37 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ನೊಂದಿಗೆ (56) ಅರ್ಧಶತಕ ಪೂರೈಸಿದರು. ಇದು ಈ ಆವೃತ್ತಿಯ ಮೊದಲ ಅರ್ಧಶತಕವಾಗಿದೆ. ಕ್ಯಾಮರೂನ್ ಗ್ರೀನ್ 8 ಭರ್ಜರಿ ಸಿಕ್ಸರ್ ಹಾಗೂ 8 ಬೌಂಡರಿ ನೆರವಿನೊಂದಿಗೆ ಕೇವಲ 47 ಎಸೆತಗಳಲ್ಲಿ ಶತಕ (ಅಜೇಯ 100*) ಪೂರೈಸಿದರು.

Exit mobile version