Site icon PowerTV

ಸಿದ್ದರಾಮಯ್ಯ ‘ಸುಳ್ಳು ಭರವಸೆಗಳ ಸರ್ದಾರ’ : ಗೋವಿಂದ ಕಾರಜೋಳ

ಬೆಂಗಳೂರು : ಸಿದ್ದರಾಮಯ್ಯ ‘ಸುಳ್ಳು ಭರವಸೆಗಳ ಸರ್ದಾರ’ ಎಂದು ಮಾಜಿ ಸಚಿವ ಗೋವಿಂದ ಎಂ.ಕಾರಜೋಳ ಟೀಕಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರವು ಮೊದಲ ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಯೋಜನೆಗೆ ತಾತ್ವಿಕ ಅನುಮೋದನೆ ನೀಡಲಾಗಿದ್ದು, ಈ ಬಗ್ಗೆ ಅವರು ವ್ಯಂಗ್ಯವಾಡಿದ್ದಾರೆ.

ರಾಜ್ಯದ ಜನತೆಗೆ ಹೊಸ ಸರ್ಕಾರ ಪ್ರಾರಂಭದಲ್ಲಿಯೇ ಮಹಾಮೋಸಗಿದೆ. ಹೊಸ ಸಂಪನ್ಮೂಲ ಕ್ರೋಡೀಕರಣದ ನಿರೀಕ್ಷೆಯಲ್ಲಿ ತಾನು ನೀಡಿದ್ದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವುದಾಗಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಘೋಷಿಸಿದೆ ಎಂದು ಕುಟುಕಿದ್ದಾರೆ.

ಇದನ್ನೂ ಓದಿ : ಸಿದ್ರಾಮಣ್ಣ.. ‘ಹೆಣ್ಮಕ್ಕಳು ಇವತ್ತೇ ಬಸ್ ಹತ್ತಲು ಸಿದ್ದ’ರಾಗಿದ್ದರು : ಬಸವರಾಜ ಬೊಮ್ಮಾಯಿ

ಕಾಗದ ಘೋಷಣಾ ಹುಲಿಯಾಗಿದೆ

ರಾಜ್ಯ ಸರ್ಕಾರದ ಸಚಿವ ಸಂಪುಟದ ನಿರ್ಣಯ ಕೇವಲ ಕಾಗದದ ಮೇಲಿನ ಘೋಷಣೆಯಾಗಬಾರದು. ಸಂಪನ್ಮೂಲ ಕ್ರೂಡೀಕರಣದ ಬಗ್ಗೆ ಯೋಚಿಸದೆ, ಭರವಸೆ ಈಡೇರಿಸದೆ, ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಸಚಿವ ಸಂಪುಟವು ಅದೇ ರೀತಿಯಾಗಿ ಘೋಷಣೆ ಮಾಡಿದರೆ ಭರವಸೆ ಅನುಷ್ಠಾನ ಮಾಡಿದಂತೆಯೇ?  ಕೇವಲ ಕೇಂದ್ರ ಸರ್ಕಾರವನ್ನು ದೂಷಿಸುತ್ತಾ ಪೂರ್ವ ಸಿದ್ಧತೆ ಇಲ್ಲದೆ ಕೇವಲ ಮತ್ತೊಂದು ಕಾಗದ ಘೋಷಣಾ ಹುಲಿಯಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯನವರ ಇಂದಿನ ಸುದ್ದಿಗೋಷ್ಠಿ ಕೇವಲ ಚುನಾವಣಾ ಭಾಷಣದಂತೆ ವರ್ಣ ರಂಜಿತವಾಗಿತ್ತು. ಸಂಪನ್ಮೂಲ ಕ್ರೂಡೀಕರಣ ಮತ್ತು ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ  ಸ್ಪಷ್ಟವಾದ ಮತ್ತು ಅನುಷ್ಠಾನಗೊಳಿಸಬಹುದಾದ ವಿಷಯಗಳನ್ನು ನಾಡಿನ ಜನತೆಯ ಮುಂದೆ ಇರಿಸಲಿ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.

Exit mobile version