Site icon PowerTV

ಟಾಸ್ ಗೆದ್ದ ಧೋನಿ ಬ್ಯಾಟಿಂಗ್ ಆಯ್ಕೆ : ಡೆಲ್ಲಿ ಚಾಲೆಂಜ್ ಗೆದ್ರೆ ‘ಚೆನ್ನೈ ಪ್ಲೇಆಫ್ ಫಿಕ್ಸ್’

ಬೆಂಗಳೂರು : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗಲಿವೆ. ಇಂದಿನ ಪಂದ್ಯ ಗೆದ್ದು ಪ್ಲೇಆಫ್ ಎಂಟ್ರಿ ಕನ್ಫರ್ಮ್ ಮಾಡಿಕೊಳ್ಳಲು ಧೋನಿ ಬಾಯ್ಸ್ ರಣತಂತ್ರ ರೂಪಿಸಿದ್ದಾರೆ.

ಚೆನ್ನೈ ತಂಡ ಟೂರ್ನಿಯಲ್ಲಿ ಆಡಿದ 13 ಪಂದ್ಯಗಳಲ್ಲಿ 7 ಗೆಲುವು, 5 ಸೋಲು ಕಂಡು 15 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಡೆಲ್ಲಿ ಆಡಿರುವ 13 ಪಂದ್ಯಗಳಲ್ಲಿ 5 ಜಯ, 8 ಪಂದ್ಯಗಳಲ್ಲಿ ಸೋಲು ಕಂಡು 10 ಅಂಕದೊಂದಿಗೆ 9ನೇ ಸ್ಥಾನದಲ್ಲಿದೆ.

ಚೆನ್ನೈ ತಂಡ

ಎಂ.ಎಸ್ ಧೋನಿ(ನಾಯಕ/ವಿ.ಕೀ), ಋತುರಾಜ್ ಗಾಯಕ್ವಾಡ್, ಕಾನ್ವೆ, ಅಜಿಂಕ್ಯಾ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ

ಡೆಲ್ಲಿ ತಂಡ

ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿ.ಕೀ), ರೋಸ್ಟ್, ಯಶ್ ಧುಲ್, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಕುಲದೀಪ್ ಯಾದವ್, ಚೇತನ್ ಸಕಾರಿಯಾ, ಖಲೀಲ್ ಅಹ್ಮದ್, ಎನ್ರಿಕ್ ನೋಕಿಯಾ

Exit mobile version