Site icon PowerTV

ಸಿದ್ದರಾಮಯ್ಯ,ಡಿಕೆ ಶಿವಕುಮಾರ್​ ಪದಗ್ರಹಣ ಸಮಾರಂಭಕ್ಕೆ ಖಾಕಿ ಸರ್ಪಗಾವಲು

ಬೆಂಗಳೂರು: ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆಶಿವಕುಮಾರ್ ಪದಗ್ರಹಣ ಹಿನ್ನೆಲೆ ಕಾರ್ಯಕ್ರಮಕ್ಕೆ ಆಗಮಿಸಲಿರುವ ವಿವಿಧ ರಾಜ್ಯಗಳ ಹಲವು ಗಣ್ಯರ ಭದ್ರತೆಗೆ ಹೆಚ್ಚುವರಿ ಪೊಲೀಸ್ ಅಧಿಕಾರಿ ನಿಯೋಜನೆಗೆ ಮನವಿ ಮಾಡಲಾಗಿದೆ.

ಮೇ 19ರಿಂದ ಭದ್ರತೆಗೆ ಅಧಿಕಾರಿ, ಸಿಬ್ಬಂದಿ ಒದಗಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಆಡಳಿತ ವಿಭಾಗದ ಅಪರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. 1,800 ಮಂದಿ ಪೊಲೀಸರಿಂದ ಕಾರ್ಯಕ್ರಮಕ್ಕೆ ಭದ್ರತೆ ಕೈಗೊಂಡಿದ್ದಾರೆ.

ಪೊಲೀಸ್​ ಕಮಿಷನರ್​​, ಸ್ಪೆಷಲ್​​​ ಟ್ರಾಫಿಕ್​ ಕಮಿಷನರ್​​ ಹಾಗೂ ಇಬ್ಬರು ಜಂಟಿ ಆಯುಕ್ತರು, ಇಬ್ಬರು ಹೆಚ್ಚುವರಿ ಆಯುಕ್ತರು ಮತ್ತು 8 ಮಂದಿ DCPಗಳ ನೇತೃತ್ವದಲ್ಲಿ ಬಂದೋಬಸ್ತ್​​ ಕೈಗೊಳ್ಳಲಾಗಿದ್ದು,10 ಮಂದಿ ACP, 28 ಮಂದಿ ಇನ್ಸ್​​ಪೆಕ್ಟರ್​​ಗಳ ನಿಯೋಜನೆ ಮಾಡಲಾಗಿದೆ.

 

Exit mobile version