Site icon PowerTV

ವಿರಾಟ್, ಡುಪ್ಲೆಸಿಸ್ ಸಿಡಿಲಬ್ಬರದ ಬ್ಯಾಟಿಂಗ್ : ಕಿಂಗ್ ‘ಕೊಹ್ಲಿ ಭರ್ಜರಿ ಶತಕ’

ಬೆಂಗಳೂರು : ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್ ಗಳು ಅಬ್ಬರಿಸುತ್ತಿದ್ದಾರೆ. ಕಿಂಗ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದರು. ಇದು ಕೊಹ್ಲಿ ಬ್ಯಾಟ್ ನಿಂದ ಬಂದ ಈ ಟೂರ್ನಿಯ ಮೊದಲ ಶತಕವಾಗಿದೆ.

ಆರ್ ಸಿಬಿ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಪ್ ಡುಪ್ಲೆಸಿಸ್ ಉತ್ತಮ ಜೊತೆಯಾಟ ಮುಂದುವರಿಸಿದ್ದಾರೆ. ಸನ್ ರೈಸರ್ಸ್ ವಿರುದ್ಧ ಮಾಜಿ ಮತ್ತು ಹಾಲಿ ನಾಯಕರಿಬ್ಬರೂ ಭರ್ಜರಿ ಬ್ಯಾಟಿಂಗ್ ಮೂಲಕ ಅರ್ಧಶತಕ ಪೂರೈಸಿದ್ದಾರೆ.

ಡುಪ್ಲೆಸಿಸ್ 47 ಎಸೆತಗಳಲ್ಲಿ ಅಜೇಯ 71 ಹಾಗೂ ಕೊಹ್ಲಿ 63 ಎಸೆತಗಳಲ್ಲಿ ಅಜೇಯ 100(ಶತಕ) ಗಳಿಸಿದ್ದಾರೆ. 187 ರನ್ ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿರುವ ಆರ್ ಸಿಬಿ, ಹೈದರಾಬಾದ್ ಬೌಲರ್ ಗಳನ್ನು ಮನಸ್ಸೋಇಚ್ಛೆ ದಂಡಿಸುತ್ತಿದ್ದಾರೆ.

ಭರ್ಜರಿ ಜೊತೆಯಾಟ

ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಪ್ ಡುಪ್ಲೆಸಿಸ್ ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ 12 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಸಿಡಿಸಿದ್ದಾರೆ. ಡುಪ್ಲೆಸಿಸ್ 6 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದಾರೆ. ಆ ಮೂಲಕ ಮುರಿಯದ 166* ರನ್ ಗಳ ಜೊತೆಯಾಟ ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ : ಶುಭ್ಮನ್ ಗಿಲ್ ‘ಸಿಡಿಲಬ್ಬರದ ಸೆಂಚುರಿ’ : ಹೈದರಾಬಾದ್ ಗೆ 189 ರನ್ ಟಾರ್ಗೆಟ್

187 ರನ್ ಗಳ ಬೃಹತ್ ಗುರಿ

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು. ಹೈದರಾಬಾದ್ ಬ್ಯಾಟರ್ ಕ್ಲಾಸೆನ್ ಭರ್ಜರಿ ಶತಕದ (103) ನೆರವಿನಿಂದ ಆರ್ ಸಿಬಿ ತಂಡಕ್ಕೆ ಬೃಹತ್ ಟಾರ್ಗೆಟ್ ನೀಡಿತು.

ಕ್ಲಾಸೆನ್ ಗೆ ಉತ್ತಮ ಸಾಥ್ ನೀಡಿದ ಹ್ಯಾರಿ ಬ್ರೂಕ್ ಅಜೇಯ 27, ನಾಯಕ ಮಾಕ್ರಂ 18, ರಾಹುಲ್ ತ್ರಿಪಾಠಿ 15, ಅಭಿಷೇಕ್ 11 ರನ್ ಗಳಿಸಿದರು. ಆರ್ ಸಿಬಿ ಪರ ಬ್ರೇಸ್ ವೆಲ್ 2, ಶಹಬಾಜ್ ಅಹಮ್ಮದ್, ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು.

Exit mobile version