Site icon PowerTV

ಸಿದ್ದರಾಮಯ್ಯ 2 ವರ್ಷ, ಡಿಕೆಶಿಗೆ 3 ವರ್ಷ ಸಿಎಂ ಪಟ್ಟ..?

ನವದೆಹಲಿ: ಸಿದ್ದರಾಮಯ್ಯ 2ನೇ ಬಾರಿಗೆ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದಾರೆ. ಆದರೆ, ಮಲ್ಲಿಕಾರ್ಜುನ್ ಖರ್ಗೆ ಸೂತ್ರದಂತೆ ಸಿದ್ದರಾಮಯ್ಯ 2 ವರ್ಷ ಹಾಗೂ ಡಿಕೆಶಿ 3 ವರ್ಷ ಸಿಎಂ ಆಗಿರಲಿದ್ದಾರೆ.

ಹೌದು, ಕಳೆದ 5 ದಿನಗಳಿಂದ ನಡೆಯುತ್ತಿದ್ದ ಸಿಎಂ ಆಯ್ಕೆ ಹೈಡ್ರಾಮಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಗುರುವಾರ ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ.ಮೊದಲನೇ ಅವಧಿಗೆ ಸಿದ್ದರಾಮಯ್ಯ ಸಿಎಂ ಹಾಗೂ ಡಿಕೆಶಿ ಡಿಸಿಎಂ ಆಗಲಿದ್ದಾರೆ. ಶನಿವಾರ (ಮೇ 20) ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಡಿಕೆಶಿಗೆ ಬಿಗ್ ಆಫರ್

ಕಾಂಗ್ರೆಸ್ ಹೈಕಮಾಂಡ್ ಡಿಕೆಶಿಗೆ ದೊಡ್ಡ ಆಫರ್ ನೀಡಿದ್ದಾರೆ. ಎಂಬ ಮಾಹಿತಿ ತಿಳಿದು ಬಂದಿದೆ. ಉಪಮುಖ್ಯಮಂತ್ರಿ ಸ್ಥಾನದ ಜೊತೆ ಇಂಧನ ಖಾತೆ ಹಾಗೂ ಜಲಸಂಪನ್ಮೂಲ ಖಾತೆಗಳನ್ನು ನೀಡಲಾಗುತ್ತದೆ ಎಂದು ವರದಿಯಾಗಿದೆ. ಹೀಗಾಗಿಯೇ ಡಿಕೆಶಿ ಡಿಸಿಎಂ ಸ್ಥಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇನ್ನು ಈ ಮಾಧ್ಯಮಗೋಷ್ಠಿಯಲ್ಲಿ ಅಧಿಕೃತವಾಗಿ ಸಿಎಲ್​ಪಿ ನಾಯಕನ ಹೆಸರು ಘೋಷಣೆ ಮಾತ್ರ ಬಾಕಿ ಇದೆ.

Exit mobile version