Site icon PowerTV

ನಾವು ಒಗ್ಗಟ್ಟಾಗಿದ್ದೇವೆ : ಸಿದ್ದರಾಮಯ್ಯ ಜತೆಗಿನ ಫೋಟೊ ಹಂಚಿಕೊಂಡ ಡಿಕೆಶಿ

ಬೆಂಗಳೂರು : ನೂತನ ಉಪಮುಖ್ಯಮಂತ್ರಿಯಾಗಿ ಹೈಕಮಾಂಡ್‌ನಿಂದ ಘೋಷಣೆಯಾಗುತ್ತಲೇ ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್  ಕರ್ನಾಟಕದ ಸುಭದ್ರ ಭವಿಷ್ಯ ಮತ್ತು ಜನಕಲ್ಯಾಣಗಾಗಿ ನಮ್ಮ ಆದ್ಯತೆಯಿದೆ ರಾಜ್ಯದ ಹಿತದೃಷ್ಟಿಯಿಂದ ನಾವು ಒಗ್ಗಟ್ಟಾಗಿದ್ದೇವೆ. ಎಂದು ಹೇಳಿದ್ದಾರೆ.

ಹೌದು, ಕರ್ನಾಟದ ನೂತನ ಮಖ್ಯಮಂತ್ರಿಯಾಗಿ ಸಿದ್ದರಾಮಯ್ಯನ್ನ ಹಾಗೂ ಏಕೈಕ ಡಿಸಿಎಂ ಆಗಿ ನೇಮಕ ಮಾಡಿರುವುದಾಗಿ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಲ್​ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದರು.

ಇನ್ನೂ ಮುಂದಿನ ಲೋಕಸಭಾ ಚುನಾವಣೆಯವರೆಗೆ ಡಿ,ಕೆ ಶಿಮಕುಮಾರ್​ ಮುಂದುವರೆಯಲಿದ್ದಾರೆ.

ಅತ್ತ ಅಧಿಕೃತ ಘೋಷಣೆ ಬಳಿಕ ಡಿ.ಕೆ ಶಿವಕುಮಾರ್ ಟ್ಚೀಟ್​ ಮಾಡಿ ಅದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ್​ ಖರ್ಗೆ ಮತ್ತು ಸಿದ್ದರಾಮಯ್ಯರವರೊಂದಿಗೆನ ಭಾವಚಿತ್ರವನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದ ಸುಭದ್ರ ಭವಿಷ್ಯ ಮತ್ತು ಜನಕಲ್ಯಾಣಗಾಗಿ ನಮ್ಮ ಆದ್ಯತೆಯಿದೆ ರಾಜ್ಯದ ಹಿತದೃಷ್ಟಿಯಿಂದ ನಾವು ಒಗ್ಗಟ್ಟಾಗಿದ್ದೇವೆ. ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

Exit mobile version