Site icon PowerTV

ಸಿದ್ದು ಭಾವಚಿತ್ರಕ್ಕೆ ಹಾಲಿನ ಅಭಿಷೇಕ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಮ್ಯಾಜಿಕ್ ನಂಬರ್ ದಿಂದ ಕಾಂಗ್ರೆಸ್ ಗೆದ್ದು ಬೀಗಿದ್ದು ಸಿಎಂ ಆಯ್ಕೆಯಲ್ಲಿ ಕಾಂಗ್ರೆಸ್​ ಹೈಕಮಾಂಡ್​ಗೆ ಭಾರೀ ತಲೆನೋವು ಆಗಿದೆ. ಕಗ್ಗಂಟಾಗಿಯೇ ಮುಂದುವರಿದ ಸಿಎಂ ಆಯ್ಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ್​ ಖರ್ಗೆ  ಇಂದು ಈ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.

ಹೌದು, ಈಗಲೇ ಸಿದ್ದರಾಮಯ್ಯನಿಗೆ ಸಿಎಂ ಎಂಬುವುದು ಬಹುತೇಕ ಪಕ್ಕಾ ಆಗುವ ಸಾಧ್ಯತೆಯಿದೆ. ಇನ್ನೂ ಸಿದ್ದರಾಮಯ್ಯ ನಿವಾಸದ ಬಳಿ ಸಿಹಿ ಹಂಚಿ ಸಂಭ್ರಮಾಚಾರಣೆ ಮಾಡಲಾಗುತ್ತಿದೆ. ಸಿದ್ದು ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಹರ್ಷೋದ್ಗಾರ.ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಅಭಿಮಾನಿಗಳು ನಿವಾಸದ ಮುಂದೆ ಜಮಾಯಿಸಿದ್ದು ಸಿದ್ದರಾಮಯ್ಯಗೆ ಜೈಕಾರ ಹಾಕ್ತಿದ್ದಾರೆ.

 

 

Exit mobile version