Site icon PowerTV

ಸಿದ್ದು,ಡಿಕೆಶಿ ಜಟಾಪಟಿ … ಯಾರಿಗೆ ಸಿಗುತ್ತೆ ಸಿಎಂ ಚುಕ್ಕಾಣಿ..?

ನವದೆಹಲಿ: ದಹಲಿಯಲ್ಲೇ ಸಿಎಂ ಕುರ್ಚಿ ಫೈಟ್ ಜೋರಾಗಿದ್ದು, ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆ ಮೇಲೆ ಸಭೆ ಮಾಡಿದರೂ ಸಿಎಂ ಆಯ್ಕೆ ಫೈನಲ್‌ ಆಗಿಲ್ಲ. ಇನ್ನೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಕರೆಸಿಕೊಂಡು ಒನ್‌ ಟು ಒನ್‌ ಮೀಟಿಂಗ್‌ ಮಾಡಿದರೂ ಕೂಡ ಯಾರನ್ನ ಪಟ್ಟಕ್ಕೇರಿಸಬೇಕು ಎನ್ನುವುದೇ ಬಗೆಹರಿಯುತ್ತಿಲ್ಲ.

ಹೌದು..ನವದೆಹಲಿಯಲ್ಲಿ ಇಂದು(ಮೇ17) ಬೆಳಗ್ಗೆ 11 ಗಂಟೆಗೆ ಫೈನಲ್‌ ಮೀಟಿಂಗ್‌ ನಡೆಯಲಿದ್ದು, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಫೈನಲ್‌ ಮೀಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಇಂದಿನ ಸಭೆಯಲ್ಲಿ ಸಿಎಂ ಹೆಸರು ಬಹುತೇಕ ಅಂತಿಮವಾಗುವ ಸಾಧ್ಯತೆಯಿದೆ.

ಒಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ಸಿಎಂ ಕುರ್ಚಿಗೆ ನಡೆಯುತ್ತಿರುವ ಕಿತ್ತಾಟ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ರಾಹುಲ್ ಗಾಂಧಿ ಅವರು ಇಂದು ಇಬ್ಬರು ನಾಯಕನ್ನು ಕೂಡಿಸಿಕೊಂಡು ಇಂದು ಫೈನಲ್​ ಮಾಡಲಿದ್ದಾರೆ.

ಕರ್ನಾಟಕ ಈ ಬಾರಿ ಕಾಂಗ್ರೆಸ್ (Congress) ಮ್ಯಾಜಿಕ್‌ ನಂಬರ್‌ ದಾಟಿ ಬಹುಮತ ಪಡೆದಿದೆ. ಆದ್ರೆ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ಮಧ್ಯೆ ಸಿಎಂ(chief minister) ಕುರ್ಚಿಗಾಗಿ ಫೈಟ್‌ ಮಾಡುತ್ತಿದ್ದಾರೆ. ದೆಹಲಿಯಲ್ಲೇ ಸಿಎಂ ಕುರ್ಚಿ ಕದನ ಜೋರಾಗಿದೆ.

 

Exit mobile version