Site icon PowerTV

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ YSV ದತ್ತ

ಬೆಂಗಳೂರು : ಜೆಡಿಎಸ್ ಹಿರಿಯ ನಾಯಕ ಹಾಗೂ ಕಡೂಡು ಕ್ಷೇತ್ರದ ​ಪರಾಜಿತ ಅಭ್ಯರ್ಥಿ ವೈಎಸ್​ವಿ ದತ್ತ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಚುಣಾವಣಾ ರಾಜೀಯದಿಂದ ಹಿಂದೆ ಸರಿದಿರುವುದಾಗಿ ಸ್ವತಃ ಅವರೇ ಪತ್ರ ಬರೆದಿದ್ದಾರೆ. ಆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ದತ್ತ ಹಂಚಿಕೊಂಡಿದ್ದಾರೆ.

ಕಡೂರು ಕ್ಷೇತ್ರದ ಮತದಾರರಿಗೆ ವೈಎಸ್‌ವಿ ದತ್ತ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನಿಂದ ನಾನು ಕಂಗೆಟ್ಟಿಲ್ಲ ಎಂದು ಹೇಳಿದ್ದಾರೆ. ಇದು ತಮ್ಮ ಕೊನೆಯ ಚುನಾವಣೆ ಎಂದು ಮೊದಲೇ ಘೋಷಿಸಿದ್ದರೂ, ಇದೀಗ ಚುನಾವಣಾ ರಾಜಕೀಯ ಬಿಟ್ಟು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ. ಅಲ್ಲದೆ, ಪ್ರತಿ ಗ್ರಾಮಕ್ಕೂ ತೆರಳಿ ತಮ್ಮ ಸೋಲಿನ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

ಸೋತಿದ್ದೀನಿ ನಿಜ, ಹಗಂತಾ ಓಡಿ ಹೋಗಲ್ಲ

ಜೆಡಿಎಸ್ ನಿಂದ ಟಿಕೆಟ್ ಪಡೆದು ಕಡೂರು ಕ್ಷೇತ್ರದಿಂದ ದತ್ತಾ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಕಡೂರು ಕ್ಷೇತ್ರದ ಜನತೆ ವೈಎಸ್‌ವಿ ದತ್ತ ಬದಲು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಸೋಲಿನ ಬಗ್ಗೆ ಮೊದಲ ಬಾರಿ ಬಹಿರಂಗವಾಗಿ ಪತ್ರ ಬರೆದಿರುವ ವೈಎಸ್‌ವಿ ದತ್ತ, ಮತ್ತೆ ಬಂದೇ ಬರ್ತೀನಿ. ಸೋತಿದ್ದೀನಿ ನಿಜ, ಹಗಂತಾ ಓಡಿ ಹೋಗಲ್ಲ ಎಂದು ಶಪಥ ಮಾಡಿದ್ದಾರೆ.

ಪ್ರೀತಿ, ವಿಶ್ವಾಸಕ್ಕೆ ದತ್ತ ಭಾವುಕ

ರಾಜ್ಯ ವಿಧಾನಸಭಾ ಚುನಾವಣೆ ಅತ್ಯಂತ ಶಾಂತಿಯುತವಾಗಿ ಪೂರ್ಣಗೊಂಡಿದೆ. ಕಳೆದ 30ದಿನಗಳಿಂದ ನಿಮ್ಮ ಮನೆ ಹಾಗೂ ಗ್ರಾಮಗಳಿಗೆ ಮತಯಾಚಿಸಲು ಬಂದಿದ್ದೇನೆ. ನಾನು ಬಂದ ಸಂದರ್ಭದಲ್ಲಿ ನೀವು ತೋರಿದ ಪ್ರೀತಿ, ವಿಶ್ವಾಸ, ಆತಿಥ್ಯಕ್ಕೆ ಸದಾ ಕೃತಜ್ಞನಾಗಿರುತ್ತೇನೆ ಎಂದು ಭಾವುಕರಾಗಿದ್ದಾರೆ.

Exit mobile version