Site icon PowerTV

ರಾಜ್ಯ ‘ಕೈ’ ನಾಯಕರಿಗೆ ಸೋನಿಯಾ ಶಾಕ್..?

ನವದೆಹಲಿ: ನವದೆಹಲಿಗೆ ತೆರಳಿ ಸೋನಿಯಾ ಗಾಂಧಿ ಭೇಟಿಯಾಗ ಬೇಕು ಬಂದ ಡಿಕೆ ಶಿವಕುಮಾರ್​ಗೆ ಸೋನಿಯಾ ಗಾಂಧಿ ಶಾಕ್​ ನೀಡಿದ್ದಾರೆ.

ಹೌದು,ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದ ಸೋನಿಯಾ ಗಾಂಧಿ ಅವರ ಭೇಟಿಯೇ ನನ್ನ ಮೊದಲ ಆದ್ಯತೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದು, ಈಗಾಗಲೇ ದೆಹಲಿಗೆ ತೆರಳಿದರು.ಅದರೆ ಸೋನಿಯಾ ಅವರು ಸದ್ಯ ಶಿಮ್ಲಾದಲ್ಲಿದ್ದು, ಮೇ 20ರವರೆಗೆ ಅಲ್ಲಿಯೇ ಇರಲಿದ್ದಾರೆ. ಹಾಗಾಗಿ ರಾಜ್ಯ ನಾಯಕರನ್ನು ಭೇಟಿಯಾಗದೆ, ಕರ್ನಾಟಕ ರಾಜಕೀಯದ ಬಗ್ಗೆ ತೀರ್ಮಾನ ಮಾಡುವ ಅಧಿಕಾರವನ್ನು ಮಲ್ಲಿಕಾರ್ಜುನ್ ಖರ್ಗೆ ಅವರಿಗೇ ಬಿಟ್ಟಿದ್ದಾರಂತೆ.

ಇದನ್ನೂ ಓದಿ: ಕೊನೆಗೂ ದೆಹಲಿಯತ್ತ ಡಿಕೆ ಶಿವಕುಮಾರ್ : ಇಂದೇ ಫೈನಲ್​ ಆಗುತ್ತಾ ಸಿಎಂ ಆಯ್ಕೆ..?

ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಮುಂದಿನ ಸಿಎಂ ಯಾರು ಎನ್ನುವ ಘೋಷಣೆ ಹೊರ ಬೀಳುವ ಸಾಧ್ಯತೆಯಿದೆ.

 

 

 

Exit mobile version