Site icon PowerTV

ಕಾಂಗ್ರೆಸ್​ ಪಕ್ಷ ನನಗೆ ದೇವಸ್ಥಾನ ಇದ್ದಂತೆ ; ದೆಹಲಿಗೆ ತೆರಳುವ ಮುನ್ನ ಡಿಕೆಶಿ ಹೇಳಿಕೆ

ಬೆಂಗಳೂರು : ಕಾಂಗ್ರೆಸ್​ ಪಕ್ಷವೇ ನಮಗೆ ಶಕ್ತಿ. ಕಾಂಗ್ರೆಸ್​ ಪಕ್ಷ ನನಗೆ ದೇವಸ್ಥಾನ ಇದ್ದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ಹೇಳಿದರು.

ಹೌದು, ದೆಹಲಿಗೆ ಭೇಟಿ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ, ಒಬ್ಬನೇ ಬರಬೇಕು ಅಂತ ಹೇಳಿದ್ದಾರೆ. ಹೀಗಾಗಿ ನಾನೊಬ್ಬನೆ ದೆಹಲಿಗೆ ಹೋಗುತ್ತಿದ್ದೇನೆ ಎಂದು ಹೇಳಿದರು.

ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ

ದೇವಸ್ಥಾನ ಎಲ್ಲ ಸುತ್ತಾಡಿದೆ. ನನ್ನ ಆರೋಗ್ಯ ಈಗ ಉತ್ತಮವಾಗಿದೆ. ಜನರು ನಮ್ಮ ನಂಬಿಕೆಯಲ್ಲಿ ಇದ್ದಾರೆ. ಆ ನಂಬಿಕೆ ಉಳಿಸುವ ಕೆಲಸ ಮಾಡುತ್ತೇನೆ. ದೇಶದ ಸಂವಿಧಾನ ಉಳಿಸಿಕೊಳ್ಳುತ್ತೇವೆ. ಎಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ. ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ ಎಂದು ಡಿಕೆಶಿ ತಿಳಿಸಿದರು.

 

Exit mobile version