Site icon PowerTV

ಬಪ್ಪರೆ ಗಂಡೇ : ‘ಸಿದ್ದು ಸಿಎಂ ಆಗದಿದ್ರೆ ಮೀಸಿ ಬೋಳಿಸ್ತಿನಿ’

ಬೆಂಗಳೂರು : ಸಿದ್ದರಾಮಯ್ಯ ಬೂಟ್ ಕೊಟ್ಟಾನ, ಅಕ್ಕಿ ಕೊಟ್ಟಾನ, ಹಾಲು ಕೊಟ್ಟಾನ. ಆದ್ರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾನ ಎಂದು ಬಾಲಕನೊಬ್ಬ ಖಡಕ್ ಡೈಲಾಗ್ ಹೊಡೆದಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಆದಿತ್ಯ ದಳವಾಯಿ ಎಂಬ ಬಾಲಕ ಇದೀಗ ಎಲ್ಲರ ಗಮನ ಸೆಳೆದಿದ್ದಾನೆ.

ಅತ್ತ ಸಿಎಂ ಗದ್ದುಗೆ ಗುದ್ದಾಟ ನಡೆದಿದ್ದರೆ, ಇತ್ತ ಬಾಲಕ ಆದಿತ್ಯ ದಳವಾಯಿ ಖಡಕ್ ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಿದ್ದರಾಮಯ್ಯ ಸಿಎಂ ಆಗೋಕು. ಇಲ್ಲದಿದ್ರೆ ಒಪ್ಪರೆ (ಒಂದು ಕಡೆಯ) ಮೀಸಿ ಬೋಳಿಸ್ತಿನಿ. ಆಗದಿದ್ರೆ ಸಾವಿರ ರೂ. ಕೊಡ್ತೀನಿ ಎಂದು ಸವಾಲೆಸೆದಿದ್ದಾನೆ.

ಇದನ್ನೂ ಓದಿ : ನೀನೆ ನನ್ನ ಹೀರೋ, ನೀವು ಸಿಎಂ ಕುರ್ಚಿಯಲ್ಲಿ ಕೂರುವಂತಾಗಲಿ : ಡಿಕೆಶಿ ಪುತ್ರಿ

ಸಿದ್ದರಾಮಯ್ಯ ಸಿಎಂ ಆಗಲೇಬೇಕು

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲೇಬೇಕು, ಆಗುತ್ತಾರೆ ಎಂದು ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ಹೇಳಿದ್ದಾರೆ. ಸಿದ್ದರಾಮಯ್ಯ ವರುಣದಲ್ಲಿ ಗೆಲ್ಲುತ್ತಾರೆ ಅಂತಾ ಹೇಳಿದ್ದೆ. ಗೆದ್ದಿದ್ದಾರೆ. ಸಿಎಂ ಆಗಿ ಊರಜಾತ್ರೆಯಲ್ಲಿ ವೀರ ಕುಣಿತ ಮಾಡುತ್ತಾರೆ ಎಂದಿದ್ದಾರೆ.

ಸಿದ್ದರಾಮಯ್ಯ ಹಿಡಿದ ಕೆಲಸ ಮಾಡುವವರೆಗೆ ಬಿಡುವುದಿಲ್ಲ. ಮುಂದೆ ಡಿ.ಕೆ ಶಿವಕುಮಾರ್​ ಸಿಎಂ ಆಗುತ್ತಾರೆ. ಸಿದ್ದರಾಮಯ್ಯ ಅವರೇ ಮುಂದೆ ನಿಂತು ಸಿಎಂ ಮಾಡುತ್ತಾರೆ. ಈ ಬಾರಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿ ಎಂದು ಹೇಳಿದ್ದಾರೆ.

Exit mobile version