Site icon PowerTV

ಲೇಡಿ ಸಿಂಗಂ ‘ಜುನ್ಮೋನಿ ರಾಭಾ’ ಇನ್ನಿಲ್ಲ

ಬೆಂಗಳೂರು : ಲೇಡಿ ಸಿಂಗಂ, ದಬಾಂಗ್ ಕಾಪ್ ಎಂದೆಲ್ಲಾ ಖ್ಯಾತಿ ಗಳಿಸಿದ್ದ ಅಸ್ಸಾಂನ ಮಹಿಳಾ ಪೊಲೀಸ್ ಅಧಿಕಾರಿ ಜುನ್ನೋನಿ ರಾಭಾ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ನಾಗಾವ್ ಜಿಲ್ಲೆಯಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಕಂಟೈನರ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹಲವು ಕ್ಲಿಷ್ಟಕರ ಪ್ರಕರಣಗಳನ್ನು ಧೈರ್ಯವಾಗಿ ಎದುರಿಸಿದ್ದ ಅವರು, ಉದ್ಯೋಗದ ಹೆಸರಿನಲ್ಲಿ ವಂಚಿಸಿದ್ದ ಭಾವಿ ಪತಿಯನ್ನು ಬಂಧಿಸಿ ಪ್ರಶಂಸೆ ಪಡೆದಿದ್ದರು. ಬಳಿಕ ಕೆಲ ಆರೋಪಗಳ ಮೇಲೆ ಅಮಾನತುಗೊಂಡಿದ್ದರು.

ಇದನ್ನೂ ಓದಿ: ಎಣ್ಣೆ ಏಟಲ್ಲಿ ಯುವಕರಿಗೆ ಥಳಿಸಿದ ಪಿಎಸ್ಐ

ಪೊಲೀಸ್ ಸಮವಸ್ತ್ರದಲ್ಲಿ ಇರಲಿಲ್ಲ

ಜುನ್ಮೋನಿ ರಾಭಾ ತನ್ನ ಖಾಸಗಿ ಕಾರಿನಲ್ಲಿ ಏಕಾಂಗಿಯಾಗಿದ್ದರು. ಈ ವೇಳೆ ಅವರು ಪೊಲೀಸ್ ಸಮವಸ್ತ್ರದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಕಾರಿಗೆ ಕಂಟೈನರ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ.

ಜುನ್ಮೋನಿ ರಾಭಾ ಅವರು ಬಾಲಿವುಡ್ ಸಿನಿಮಾಗಳ ನಂತರ ಲೇಡಿ ಸಿಂಗಂ, ದಬಾಂಗ್ ಕಾಪ್ ಎಂದು ಜನಪ್ರಿಯತೆ ಗಳಿಸಿದ್ದರು. ಜೊತೆಗೆ ವಿವಾದಗಳ ಕಾರಣಕ್ಕೂ ಸುದ್ದಿಯಾಗಿದ್ದರು.

Exit mobile version