Site icon PowerTV

ಈಶ್ವರ ಖಂಡ್ರೆಯನ್ನು ‘ಸಿಎಂ ಅಥವಾ ಡಿಸಿಎಂ’ ಮಾಡಿ : ಮಠಾಧೀಶರ ಆಗ್ರಹ

ಬೀದರ್ : ಕೆಪಿಸಿಸಿ‌ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯನ್ನು ಸಿಎಂ ಅಥವಾ ಡಿಸಿಎಂ ಮಾಡಬೇಕೆಂದು ಬೀದರ್‌ನಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು ಆಗ್ರಹಿಸಿದ್ದಾರೆ.

ಬೀದರ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಡೋಳ ಮಠದ ಶ್ರೀಗಳು, ಭಾಲ್ಕಿ ಮಠದ ಶ್ರೀಗಳು, ಹಲಸೂರು ಮಠದ ಶ್ರೀಗಳು ಸೇರಿದಂತೆ ವಿವಿಧ ಸ್ವಾಮೀಜಿಗಳು ಒತ್ತಾಯಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಶ್ವರ ಖಂಡ್ರೆ ಪ್ರಭಾವಿ ನಾಯಕ. ಕಲ್ಯಾಣ ಕರ್ನಾಟಕ ಅಭಿವೃದ್ದಿ ಆಗಬೇಕಾದರೆ, ಈಶ್ವರ ಖಂಡ್ರೆಗೆ ಸೂಕ್ತ ಸ್ಥಾನಮಾನ ಸೀಗಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ, ಲಿಂಗಾಯತರ ಕೊಡುಗೆ ಅಪಾರ ಇದೆ. ಈ ಹಿನ್ನೆಲೆಯಲ್ಲಿ ಈಶ್ವರ ಖಂಡ್ರೆಗೆ ಸ್ಥಾನಮಾನ ಸಿಗಬೇಕು ಎಂಬುದು ಅವರ ವಾದವಾಗಿದೆ.

ಇದನ್ನೂ ಓದಿ : ನನ್ನ ಬಳಿ 135 ಶಾಸಕರಿದ್ದಾರೆ ಎಂದ ಡಿಕೆಶಿ

ಡಿಸಿಎಂ ಸ್ಥಾನ ಆದ್ರೂ ನೀಡಲೇಬೇಕು

ಹಿಂದೆ ವಿರೇಂದ್ರ ಪಾಟೀಲ‌ ಇದ್ದಾಗ, ಅಭಿವೃದ್ದಿ ಆಗಿದ್ದು ಹೊರತುಪಡಿಸಿ ಮತ್ತೆ ಕಲ್ಯಾಣ ಕರ್ನಾಟಕ ಅಭಿವೃದ್ದಿ ಆಗಿಲ್ಲ. ಬೀದರ್ ಜಿಲ್ಲೆಯವರಿಗೆ ಇದುವರೆಗೆ ಯಾವುದೇ ಉನ್ನತ ಖಾತೆಯನ್ನ ನೀಡಿಲ್ಲ. ಈ ಬಾರಿ ಈಶ್ವರ ಖಂಡ್ರೆಗೆ ಸಿಎಂ ಸ್ಥಾನ ನೀಡಲೇಬೇಕು. ಇಲ್ಲವಾದರೆ ಡಿಸಿಎಂ ಆದ್ರೂ ನೀಡಲೇಬೇಕು ಎಂದು ಸ್ವಾಮೀಜಿಗಳು  ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಕಾಂಗ್ರೆಸ್​​​ ನಾಯಕ ರಾಹುಲ್​ ಗಾಂಧಿ, ಕಾಂಗ್ರೆಸ್​​​ ನಾಯಕಿ ಸೋನಿಯಾ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಲು ತಯಾರಿದ್ದೇವೆ. ಸೋನಿಯಾ ಅವರ, ಡೇಟ್ ಕೂಡಾ ಕೇಳಿದ್ದೇವೆ, ಅವರ ಜೊತೆ ಚರ್ಚೆ ಮಾಡಿ, ಖಂಡ್ರೆಗೆ ಸ್ಥಾನಮಾನ ನೀಡುವಂತೆ. ಸಿಎಂ ಸ್ಥಾನ ನಿರ್ವಹಿಸಲು, ಈಶ್ವರ ಖಂಡ್ರೆ ಸಮರ್ಥರಿದ್ದಾರೆ, ಅವರಿಗೆ ಸಿಎಂ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Exit mobile version