Site icon PowerTV

ಇಂದು ಡಿಕೆ ಶಿವಕುಮಾರ್ ಹುಟ್ಟುಹಬ್ಬ ; ಎಐಸಿಸಿ ಕಡೆಯಿಂದ ಸಿಗುತ್ತಾ ಬರ್ತ್ ಡೇ ಗಿಫ್ಟ್..?

ಬೆಂಗಳೂರು:  ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಸಿಎಂ ಸ್ಥಾನದ ಮೇಲೆ ಆಕಾಂಕ್ಷಿಯಾಗಿರು ಡಿಕೆ ಶಿವಕುಮಾರ್ ಅವರಿಗೆ ಎಐಸಿಸಿ ಬರ್ತ್ ಡೇ ಗಿಫ್ಟ್ ಸಿಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.

ಹೌದು, ಕಾಂಗ್ರೆಸ್ ಪಕ್ಷ ಅತ್ಯಂತ ಬಹುಮತದಿಂದ ರಾಜ್ಯವಿಧಾನಸಭಾ ಚುನಾವಣಾಯಲ್ಲಿ ವಿಜಯಶಾಲಿಯಾದ್ದರು. ಕೂಡ ಸಿಎಂಕುರ್ಚಿಗಳಾಗಿ ಕಾಂಗ್ರೆಸ್​ ನಾಯಕರಲ್ಲಿ ಫೈಟ್​ ಶುರುವಾಗಿದ್ದು, ಕೈ ಹೈಕಮಾಂಡ್​ಗೆ ತಲೆನೋವು ಆಗಿದೆ.

ಪ್ರಚಂಡ ಬಹುಮತ ಪಡೆದಿರೋ ಕಾಂಗ್ರೆಸ್‌ನಲ್ಲಿ ಇದೀಗ ಸಿಎಂ ಕುರ್ಚಿ ಫೈಟ್ ಮತ್ತಷ್ಟು ತ್ರೀವಗೊಲ್ಳತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದಿದ್ದಾರೆ.

ಇನ್ನೂ ಭಾನುವಾರ ಖಾಸಗಿ ಹೋಟೆಲ್​ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿದ್ದು, ನೂತನ ಶಾಸಕರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ.

ಸಿಎಲ್​ಪಿ ಸಭೆ ಬಳಿಕ ಖಾಸಗಿ ಹೋಟೆಲ್​ನಲ್ಲಿ ಕೇಕ್ ಕತ್ತರಿಸಿ ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಣೆ

ಮಾಜಿ ಸಿಎಂ ಸಿದ್ದರಾಮಯ್ಯ ಡಿಕೆ ಶಿಮಾಕುಮಾರ್​ಗೆ ಕೇಕ್​ ಕತ್ತರಿಸಿ ಬರ್ತ್​ ಡೇಗೆ ವಿಶ್​ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್​ದೀಪ್​ ಸುರ್ಜೇವಾಲ, ಮಾಜಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಬರ್ತ್​ ಡೇ ಆಚರಣೆಯನ್ನು ಆಚರಿಸಿದ್ದರು.

ಇನ್ನೂ ಹಿರಿಯ ನಾಯಕ ಸುಶೀಲ್ ಕುಮಾರ್ ಶಿಂಧೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಸಿಂಗ್, ದೀಪಕ್ ಬಬಾರಿಯಾರನ್ನ ವೀಕ್ಷಕರಾಗಿ ಹೈಕಮಾಂಡ್ ಕಳಿಸಿತ್ತು. ಮೊದಲ ಶಾಸಕಾಂಗ ಸಭೆಯಲ್ಲಿ ಪ್ರತಿಯೊಬ್ಬ ಶಾಸಕರೂ ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ.

ಕೈ ಹೈಕಮಾಂಡ್ ಯಾರಿಗೆ ಸಿಎಂ ಪಟ್ಟ ಕೊಂಡುತ್ತಾರೆ ಎಮಬುವುದನ್ನು ಕಾದುನೋಡಬೇಕಿದೆ.

 

Exit mobile version