Site icon PowerTV

ಹಸ್ತದ ಗುರುತು ಹೇರ್ ಕಟಿಂಗ್ ಮಾಡಿಸಿಕೊಂಡ ಕೈ ಅಭಿಮಾನಿ

ಚಾಮರಾಜನಗರ : ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಹುಮತದಿಂದ ಜಯಶಾಲಿಯಾಗಿರುವ ಕಾಂಗ್ರೆಸ್​ ಪಕ್ಷದ ಮೇಲೆ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ..

ಹೌದು, ಇಲ್ಲೊಬ್ಬ ವ್ಯಕ್ತಿ ಕಾಂಗ್ರೆಸ್ ಜಯಶಾಲಿಯಾಗಿದ್ದಕ್ಕೆ ಕೈ ಅಭಿಮಾನಿ ಹಸ್ತದ ಗುರುತಿನ ಹೇರ್ ಕಟಿಂಗ್ ಮಾಡಿಸಿಕೊಂಡು ಎಲ್ಲರ ಗಮನ ಸಳೆದಿದೇನ

ಗುಂಡ್ಲುಪೇಟೆ ತಾಲೂಕಿನ ಅರೇಪುರ ಗ್ರಾಮದ ಜಿ.ಮೂರ್ತಿ ಎಂಬವರು ಗಣೇಶ್ ಪ್ರಸಾದ್ ಅಭಿಮಾನಿಯಾಗಿದ್ದು ಕಾಂಗ್ರೆಸ್ ನ ಕಟ್ಟಾ ಬೆಂಬಲಿಗರಾಗಿದ್ದಾರೆ. ಮೊದಲ ಸ್ಪರ್ಧೆಯಲ್ಲೇ ಗಣೇಶ್ ಪ್ರಸಾದ್ ಗೆಲುವು ಕಂಡ ಹಿನ್ನೆಲೆಯಲ್ಲಿ ಹರ್ಷಗೊಂಡಿರುವ ಮೂರ್ತಿ ಹಸ್ತದ ಗುರುತಿನ ಹೇರ್ ಕಟಿಂಗ್ ಮಾಡಿಸಿಕೊಂಡು ವಿಶೇಷ ಅಭಿಮಾನ ಮೆರೆದಿದ್ದಾರೆ.

ಗ್ರಾಮದಲ್ಲಿ ಹಾಗೂ ಅವರು ಹೋದಡೆಯಲ್ಲೆಲ್ಲಾ ಹಸ್ತದ ಗುರುತಿನ ಹೇರ್ ಕಟಿಂಗ್ ಗಮನ ಸೆಳೆಯುತ್ತಿದೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಭಾರಿಸಿದೆ. ಕಾಂಗ್ರೆಸ್​ ಮ್ಯಾಜಿಕ್ ನಂಬರ್ ದಾಟಿದ್ದು, ಬಹುಮತದ ಸರ್ಕಾರ ರಚಿಸುವುದು ಖಚಿತವಾಗಿದೆ.

Exit mobile version